ಕಲಬುರಗಿ:ಅಂತ್ಯಕ್ರಿಯೆಗೆ ಬಂದಿದ್ದ ಮಹಿಳೆಯನ್ನು ಅತ್ಯಾಚಾರಗೈದು ಹೊಲದಲ್ಲಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಅಫ್ಜಲ್ಪುರ ತಾಲೂಕಿನ ಬಳೂರ್ಗಿ ಗ್ರಾಮದಲ್ಲಿ ನಡೆದಿದೆ.
ಅಂತ್ಯಕ್ರಿಯೆಗೆ ಬಂದಿದ್ದ ಮಹಿಳೆ ಮೇಲೆ ಅತ್ಯಾಚಾರ ಎಸಗಿ, ಬರ್ಬರವಾಗಿ ಹತ್ಯೆಗೈದ ಪಾಪಿಗಳು! - ಕಲಬುರಗಿಯಲ್ಲಿ ಅತ್ಯಾಚಾರ,ಕೊಲೆ ಸುದ್ದಿ
ಅಂತ್ಯಕ್ರಿಯೆಗೆ ಬಂದಿದ್ದ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಘಟನೆ ಕಲಬುರಗಿ ಜಿಲ್ಲೆ ಅಫ್ಜಲ್ಪುರ ತಾಲೂಕಿನ ಬಳೂರ್ಗಿ ಗ್ರಾಮದಲ್ಲಿ ನಡೆದಿದೆ.
![ಅಂತ್ಯಕ್ರಿಯೆಗೆ ಬಂದಿದ್ದ ಮಹಿಳೆ ಮೇಲೆ ಅತ್ಯಾಚಾರ ಎಸಗಿ, ಬರ್ಬರವಾಗಿ ಹತ್ಯೆಗೈದ ಪಾಪಿಗಳು!](https://etvbharatimages.akamaized.net/etvbharat/prod-images/768-512-4907212-thumbnail-3x2-ranju.jpg)
ಮಹಿಳೆ ಮೇಲೆ ಅತ್ಯಾಚಾರ,ಕೊಲೆ
ಮಹಿಳೆ ಮೇಲೆ ಅತ್ಯಾಚಾರ,ಕೊಲೆ
ಮೃತ ಮಹಿಳೆ ಅಫ್ಜಲ್ಪುರದವರು ಎನ್ನಲಾಗಿದೆ. ಅವರು ತಮ್ಮ ದೊಡ್ಡಮ್ಮನ ಅಂತ್ಯಕ್ರಿಯೆಗೆಂದು ಬಳೂರ್ಗಿಗೆ ಬಂದಿದ್ದರು. ಈ ವೇಳೆ ಅತ್ಯಾಚಾರ ಎಸಗಿ ಕುತ್ತಿಗೆ ಸೀಳಿ ಕೊಲೆಗೈದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಅಫ್ಜಲ್ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದುಷ್ಕರ್ಮಿಗಳ ಬಂಧನಕ್ಕೆ ಜಾಲ ಬೀಸಲಾಗಿದೆ.