ಕಲಬುರಗಿ:ನಗರದ ಕ್ರೈಂ ಬ್ರಾಂಚ್ ಪಿಎಸ್ಐ ಯಶೋಧಾ ಕಟಕೆ ಅವರು ಸಮಾಜಮುಖಿ ಮಾನವೀಯ ಕಾರ್ಯದ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಕರ್ತವ್ಯದ ಜೊತೆಗೆ ಮಹಿಳಾ ಪಿಎಸ್ಐ ಮಾನವೀಯ ಕಾರ್ಯ - ಸಮಾಜಮುಖಿ ಕಾರ್ಯಗಳತ್ತ ಮುಖ ಮಾಡಿದ ಮಹಿಳಾ ಪಿಎಸ್ಐ
ಅಪರಾಧ ವಿಭಾಗದಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿರುವ ಮಹಿಳೆಯೊಬ್ಬರು ಸಮಾಜಮುಖಿ ಕಾರ್ಯದ ಮೂಲಕ ಜನಮನ್ನಣೆ ಗಳಿಸಿದ್ದಾರೆ.
Women PSI doing social work apart from her duty at Kalburgi
ಇವರು ತಮಗೆ ಬಿಡುವು ಸಿಕ್ಕಾಗ ಸಾರ್ವಜನಿಕ ಉದ್ಯಾನವನಕ್ಕೆ ತೆರಳುತ್ತಾರೆ. ಈ ವೇಳೆ ಅಲ್ಲಿರುವ ಮಣ್ಣಿನ ಅರವಟ್ಟಿಗೆಗಳಿಗೆ ನೀರು, ಜೋಳ, ಗೋಧಿ, ಸಜ್ಜೆ, ರವಾ ಹೀಗೆ ಇತರ ದಿನಸಿ ಪದಾರ್ಥಗಳನ್ನು ಹಾಕುತ್ತಾರೆ. ಈ ಮುಖೇನ ಪಕ್ಷಿ ಸಂಕುಲವನ್ನು ಕಾಪಾಡಲು ಮುಂದಾಗಿದ್ದಾರೆ.
ಜಿಲ್ಲೆಯಲ್ಲಿ ಬೇಸಿಗೆಯ ತಾಪಮಾನ ಹೆಚ್ಚಾಗಿದೆ. ಜನರ ಜೊತೆ ಮೂಕ ಪ್ರಾಣಿ, ಪಕ್ಷಿಗಳ ಬವಣೆ ಹೇಳತೀರದಾಗಿದೆ. ಮಹಿಳಾ ಪೊಲೀಸ್ ಅಧಿಕಾರಿಯ ಕಾರ್ಯಕ್ಕೆ ಕೆಲವು ಸಂಘಟನೆ ಮುಖಂಡರು, ಮಹಿಳೆಯರು ಸಾಥ್ ನೀಡಿದ್ದಾರೆ.