ಕಲಬುರಗಿ :ಕೊರೊನಾ ಪೀಡಿತ ವೃದ್ಧೆಯ ಕುಟುಂಬಕ್ಕೆ ನೀರು ಹಾಗೂ ಅಗತ್ಯ ದಿನಸಿ ಪದಾರ್ಥಗಳನ್ನು ಒದಗಿಸುವ ಮೂಲಕ ಮಹಿಳಾ ಪಿಎಸ್ಐ ಒಬ್ಬರು ಮಾನವೀಯತೆ ಮೆರೆದಿರುವ ಘಟನೆ ಜಿಲ್ಲೆಯ ಫರತಾಬಾದ್ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಸೋಂಕಿತ ವೃದ್ದೆಯ ಕುಟುಂಬವನ್ನು ಅಕ್ಕಪಕ್ಕದವರು ಸೇರಿಸಿಕೊಳ್ಳದೆ ನೀರು ಸಹ ನೀಡದಿರುವುದನ್ನು ತಿಳಿದ ಫರತಾಬಾದ್ ಪೊಲೀಸ್ ಠಾಣೆಯ ಮಹಿಳಾ ಪಿಎಸ್ಐ ಯಶೋದಾ ಕಟಕೆ ಅವರು ಪೊಲೀಸ್ ಠಾಣೆಯಿಂದ ನೀರು ಪೂರೈಕೆ ಮಾಡುವುದರ ಜೊತೆಗೆ ತಮ್ಮ ಸ್ವಂತ ದುಡ್ಡಿನಲ್ಲಿ ಅಗತ್ಯ ದಿನಸಿ ಪದಾರ್ಥಗಳನ್ನು ಕೊಡಿಸುವ ಮೂಲಕ ನೆರವಾಗಿದ್ದಾರೆ.