ಕರ್ನಾಟಕ

karnataka

ETV Bharat / state

ಕೌಟುಂಬಿಕ ಕಲಹ : ಚಿಂಚೋಳಿಯಲ್ಲಿ ಗಂಡನ ತಲೆಮೇಲೆ ಕಲ್ಲುಎತ್ತಿಹಾಕಿ ಕೊಂದ ಪತ್ನಿ - kalburgi latest news

ಗಂಡ -ಹೆಂಡತಿ ನಡುವಿನ ಕಲಹ ತಾರಕಕ್ಕೇರಿ ಹೆಂಡತಿಯೇ ಗಂಡನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾಳೆ. ಈ ಸಂಬಂಧ ಮಗನೇ ತಾಯಿ ವಿರುದ್ಧ ದೂರು ನೀಡಿದ್ದಾನೆ.

Wife killed husband in gulbarga over family dispute
ಗಂಡನ ತಲೆಮೇಲೆ ಕಲ್ಲುಎತ್ತಿಹಾಕಿ ಬರ್ಬರವಾಗಿ ಹತ್ಯೆ ಮಾಡಿದ ಹೆಂಡತಿ

By

Published : Aug 9, 2021, 2:13 PM IST

ಕಲಬುರಗಿ: ಕೌಟುಂಬಿಕ ಕಲಹದ ಹಿನ್ನೆಲೆ‌ ಹೆಂಡತಿಯೇ ಗಂಡನ ತಲೆಯ ಮೇಲೆ ಕಲ್ಲು ಹಾಕಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಚಿಂಚೋಳಿ ತಾಲೂಕಿನ ಮಿರಿಯಾಣ ಹೊರವಲಯದ ಗಣಿ ಪ್ರದೇಶದಲ್ಲಿ ನಡೆದಿದೆ.

ಭದ್ರು ರಾಠೋಡ್ (48) ಕೊಲೆಯಾದ ವ್ಯಕ್ತಿ. ಈತ ತೆಲಂಗಾಣ ರಾಜ್ಯದ ವಿಕಾರಾಬಾದ್ ಜಿಲ್ಲೆ ಬಾವಿಮಡಿ ತಾಂಡದ‌ ನಿವಾಸಿಯಾಗಿದ್ದಾನೆ. ಮಿರಿಯಾಣಕ್ಕೆ ಮೊಮ್ಮಗನ ತೊಟ್ಟಿಲು ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಈ ದುರಂತ ಸಂಭವಿಸಿದೆ.

ಸುಮಾರು ಮೂರ್ನಾಲ್ಕು ವರ್ಷದಿಂದ ಗಂಡ ಭದ್ರು ಹಾಗೂ ಹೆಂಡತಿ ಸುಶೀಲಾಬಾಯಿ ನಡುವೆ ಕಲಹ ಇತ್ತು ಎನ್ನಲಾಗಿದೆ. ಶನಿವಾರ ಮಗಳ ಮನೆಗೆ ತೊಟ್ಟಿಲು ಕಾರ್ಯಕ್ರಮಕ್ಕೆ ಬಂದಿದ್ದ ವೇಳೆ ಮತ್ತೆ ಇಬ್ಬರ ನಡುವೆ ಜಗಳ ನಡೆದಿದೆ. ಇಂದು ಮಿರಿಯಾಣ ಹೊರವಲಯದ ಗಣಿ ಪ್ರದೇಶದಲ್ಲಿ ಭದ್ರು ತಲೆಮೇಲೆ ಕಲ್ಲುಹಾಕಿ ಕೊಲೆ ಮಾಡಲಾಗಿದೆ.

ತಂದೆಯನ್ನು ಸ್ವತಃ ತಾಯಿಯೇ ಕೊಲೆ ಮಾಡಿದ್ದಾಳೆಂದು ಮಗ‌ ಮಿರಿಯಾಣ ಠಾಣೆಯಲ್ಲಿ ದೂರು ನೀಡಿದ್ದಾನೆ.

ABOUT THE AUTHOR

...view details