ಕಲಬುರಗಿ: ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡುತ್ತಿದ್ದ ಮಡದಿ ಸಾವಿನ ಸುದ್ದಿ ಕೇಳಿದ ಪತಿ, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ಕಮಲಾಪುರ ತಾಲೂಕಿನ ಲಾಡಮುಗಳಿ ಗ್ರಾಮದಲ್ಲಿ ನಡೆದಿದೆ.
ಓದಿ: ಒಂದೇ ಕುಟುಂಬದ ಮೂರು ಮೃತ ದೇಹಗಳು ಪತ್ತೆ.. ಆತ್ಮಹತ್ಯೆಯೋ, ಕೊಲೆಯೋ?

ಲಾಡಮುಗಳಿ ಗ್ರಾಮದ ನಿವಾಸಿ ದೇವಾ ಗುತ್ತೆದಾರ್ (28) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈತನ ಪತ್ನಿ ಜ್ಯೋತಿ ನಿನ್ನೆ ಮಹಾರಾಷ್ಟ್ರದ ಪುಣೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದರು.
ನಾಲ್ಕು ವರ್ಷದ ಹಿಂದೆ ದೇವಾ ಹಾಗೂ ಜ್ಯೋತಿ ಮದುವೆಯಾಗಿದ್ದು, ಸುಂದರ ಸಂಸಾರ ಕೂಡಾ ನಡೆಸಿದ್ದರು. ಆದರೆ ಮಕ್ಕಳು ಆಗಿರಲಿಲ್ಲ ಎನ್ನಲಾಗಿದೆ. ಈ ನಡುವೆ ನಿನ್ನೆ ಜ್ಯೋತಿ ಹೃದಯಾಘಾತಕ್ಕೆ ತುತ್ತಾಗಿ ಸಾವನ್ನಪ್ಪಿದ್ದಾಳೆ.
ಇದರಿಂದ ನೊಂದಿದ್ದ ದೇವಾ ಗ್ರಾಮದಲ್ಲಿ ಇಂದು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಕೊನೆಗೂ ಗಂಡ ಹೆಂಡತಿ ಇಬ್ಬರೂ ಸಾವಿನಲ್ಲಿ ಒಂದಾಗುವ ಮೂಲಕ ಮನ ಕಲುಕುವಂತೆ ಮಾಡಿದ್ದಾರೆ. ಈ ಸಂಬಂಧ ಮಹಾಗಾಂವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.