ಕಲಬುರಗಿ: ಅಮೆರಿಕ ಸೇರಿದಂತೆ ಬೇರೆ ಬೇರೆ ರಾಷ್ಟ್ರಗಳು ತಮ್ಮ ಪ್ರಜೆಗಳಿಗೆ ಕೊರೊನಾ ಲಸಿಕೆ ಉಚಿತವಾಗಿ ಹಂಚುತ್ತಿವೆ. ಆದರೆ, ಭಾರತ 500 ರಿಂದ 1800 ರೂ. ರವರೆಗೆ ನಿಗದಿ ಮಾಡಿದೆ. ಲಸಿಕೆಯನ್ನು ಉಚಿತವಾಗಿ ಯಾಕೆ ಒದಗಿಸುತ್ತಿಲ್ಲ ಎಂದು ಕೆಪಿಸಿಸಿ ವಕ್ತಾರ ಪ್ರಿಯಾಂಕ ಖರ್ಗೆ ಸರ್ಕಾರದ ತೀರ್ಮಾನ ಪ್ರಶ್ನಿಸಿದ್ದಾರೆ.
ಭಾರತ ಲಸಿಕೆ ಉಚಿತವಾಗಿ ಏಕೆ ಒದಗಿಸುತ್ತಿಲ್ಲ: ಸರ್ಕಾರಕ್ಕೆ ಪ್ರಿಯಾಂಕ ಖರ್ಗೆ ಪ್ರಶ್ನೆ - ಕೊರೊನಾದಂತಹ ಸಾಂಕ್ರಾಮಿಕ ರೋಗ
ದೇಶಾದ್ಯಂತ ನಡೆದ ಉಚಿತ ಲಸಿಕಾ ಕಾರ್ಯಕ್ರಮದಿಂದಾಗಿ ಇಂದು ದೇಶ ಪೋಲಿಯೋ ಮುಕ್ತವಾಗಿದೆ. ಕೊರೊನಾದಂತಹ ಸಾಂಕ್ರಾಮಿಕ ರೋಗಕ್ಕೆ ಲಸಿಕೆ ವಿತರಿಸಬೇಕಿರುವುದು ಅವಶ್ಯಕತೆಯಷ್ಟೇ ಅಲ್ಲ ಅನಿವಾರ್ಯತೆ ಕೂಡಾ ಎಂದು ಪೋಲಿಯೋ ಲಸಿಕೆ ವಿತರಣಾ ವ್ಯವಸ್ಥೆಯನ್ನು ನೆನಪಿಸಿಕೊಂಡಿದ್ದಾರೆ.
ಟ್ವೀಟ್ ಮೂಲಕ ಸರ್ಕಾರದ ನಡೆ ಪ್ರಶ್ನಿಸಿರುವ ಅವರು ಅಮೆರಿಕ, ಕೆನಡಾ, ಇಂಗ್ಲೆಂಡ್ ಹಾಗೂ ಪಾಕಿಸ್ತಾನಗಳಲ್ಲಿ ಕೊರೊನಾಗೆ ಉಚಿತ ಲಸಿಕೆ ಹಂಚುತ್ತಿರುವಾಗ ಭಾರತ ಹಣ ನಿಗದಿಸಿರುವುದು ಯಾಕೆ? ಎಂದು ಪ್ರಶ್ನಿಸಿದ್ದಾರೆ. ದೇಶಾದ್ಯಂತ ನಡೆದ ಉಚಿತ ಲಸಿಕಾ ಕಾರ್ಯಕ್ರಮದಿಂದಾಗಿ ಇಂದು ದೇಶ ಪೋಲಿಯೋ ಮುಕ್ತವಾಗಿದೆ. ಕೊರೊನಾದಂತಹ ಸಾಂಕ್ರಾಮಿಕ ರೋಗಕ್ಕೆ ಲಸಿಕೆ ವಿತರಿಸಬೇಕಿರುವುದು ಅವಶ್ಯಕತೆಯಷ್ಟೇ ಅಲ್ಲ ಅನಿವಾರ್ಯತೆ ಕೂಡಾ ಎಂದು ಪೋಲಿಯೋ ಲಸಿಕೆ ವಿತರಣಾ ವ್ಯವಸ್ಥೆಯನ್ನು ನೆನಪಿಸಿಕೊಂಡಿದ್ದಾರೆ.
ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರವೇ ಉಚಿತವಾಗಿ ಲಸಿಕೆ ನೀಡುತ್ತಿದ್ದರೂ, ಅವರಿಗೆ ಹಣ ಸಂಗ್ರಹಿಸಲು ಅನುಮತಿ ಕೊಟ್ಟಿರುವ ಔಚಿತ್ಯವನ್ನು ಶಾಸಕರು ಪ್ರಶ್ನಿಸಿದ್ದಾರೆ. ಲಸಿಕೆಗೆ ಹಣ ನಿಗದಿಪಡಿಸಿರುವುದು ಲಸಿಕಾ ಅಭಿಯಾನಕ್ಕೆ ಕಂಟಕವಾಗಲಿದೆ ಎಂದು ಎಚ್ಚರಿಸಿರುವ ಅವರು, ಈಗಾಗಲೇ ಲಸಿಕೆ ಹಾಕಲು ನಿಗದಿ ಪಡಿಸಿರುವ ಟಾರ್ಗೆಟ್ ನ ಶೇ. 50 ರಷ್ಟನ್ನೂ ಮುಟ್ಟಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ ಆದ್ದರಿಂದ ಸರ್ಕಾರ ಈ ಕೂಡಲೇ ಲಸಿಕೆಯನ್ನು ಸಂಪೂರ್ಣ ಉಚಿತವಾಗಿ ವಿತರಿಸುವಂತೆ ಆಗ್ರಹಿಸಿದ್ದಾರೆ.