ಕಲಬುರಗಿ:ಪ್ರಧಾನಿ ಮೋದಿ ನೇತೃತ್ವದ ಎರಡನೇ ಅವಧಿಯ ಕೇಂದ್ರ ಸರ್ಕಾರ ನಾಳೆ ಪ್ರಥಮ ಬಜೆಟ್ ಮಂಡಿಸಲಿದ್ದು, ಬಜೆಟ್ ಮಂಡಿಸಲಿರುವ ಕರ್ನಾಟಕದ ಪ್ರತಿನಿಧಿಯಾಗಿರುವ ಹಣಕಾಸು ಸಚಿವೆ ನಿರ್ಮಲಾ ಸಿತಾರಾಮನ್ ಅವರು ಕರ್ನಾಟಕಕ್ಕೆ ಹೆಚ್ಚು ಆದ್ಯತೆ ನೀಡಬಹುದು ಎನ್ನುವ ಮಾತುಗಳು ಕೇಳಿಬರುತ್ತಿವೆ.
ಕೇಂದ್ರ ಬಜೆಟ್ನಲ್ಲಿ ಹೈದರಾಬಾದ್ ಕರ್ನಾಟಕಕ್ಕೆ ಸಿಗುತ್ತಾ ಆದ್ಯತೆ...? - undefined
ಬರಗಾಲದ ಹಿನ್ನಲೆ ಕೃಷಿಕರಿಗೆ ಸಂಕಷ್ಟ ಎದುರಾಗಿದೆ. ರೈತರ ಸಂಕಷ್ಟ ನೀಗಿಸಲು ಸಂಪೂರ್ಣ ಸಾಲ ಮನ್ನಾ, ಕೃಷಿಗೆ ಸಾಲ ಸೌಲಭ್ಯ, ರೈತರ ಆದಾಯ ಹೆಚ್ಚಿಸುವ ಜೊತೆಗೆ ಸ್ವಾಮಿನಾಥನ್ ವರದಿ ಅನುಸಾರ ಸೌಲಭ್ಯ, ಲಘು ನೀರಾವರಿಗೆ ಹೆಚ್ಚಿನ ಆದ್ಯತೆ ಸಿಗಬಹುದೆಂಬ ನೀರಿಕ್ಷೆಯೂ ಇಲ್ಲಿನ ಜನರಲ್ಲಿದೆ.
![ಕೇಂದ್ರ ಬಜೆಟ್ನಲ್ಲಿ ಹೈದರಾಬಾದ್ ಕರ್ನಾಟಕಕ್ಕೆ ಸಿಗುತ್ತಾ ಆದ್ಯತೆ...?](https://etvbharatimages.akamaized.net/etvbharat/prod-images/768-512-3748362-thumbnail-3x2-klb.jpg)
ಮಾರುತಿ ಮಾನ್ಪಡೆ, ಬಸವರಾಜ್ ಇಂಗಿನ್
ಬಜೆಟ್ ಕುರಿತು ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಾರುತಿ ಮಾನ್ಪಡೆ ಮತ್ತು ರೈತ ಮುಖಂಡ ಬಸವರಾಜ್ ಇಂಗಿನ್.
ಲೋಕಸಭೆ ಚುನಾವಣೆಗೂ ಮುನ್ನ ಇದೇ ಕೇಂದ್ರ ಸರ್ಕಾರ ಮಧ್ಯಂತರ ಬಜೆಟ್ ಮಂಡಿಸಿತ್ತು. ಕಳೆದ ಬಜೆಟ್ನಲ್ಲಿ ಹೈದರಾಬಾದ್ ಕರ್ನಾಟಕ ಭಾಗಕ್ಕೆ ಹೇಳಿಕೊಳ್ಳುವ ಆದ್ಯತೆ ಸಿಗಲಿಲ್ಲ ಎಂಬ ಅಸಮದಾನ ಈ ಭಾಗದ ಜನರಲ್ಲಿತ್ತು. ನಾಳಿನ ಬಜೆಟ್ನಲ್ಲಾದರೂ ಹೈ-ಕಗೆ ಹೆಚ್ಚಿನ ಆದ್ಯತೆ ಸಿಗಬಹುದು ಎಂಬ ನೀರಿಕ್ಷೆ ಇಲ್ಲಿನ ಜನರದಾಗಿದೆ.