ಕರ್ನಾಟಕ

karnataka

ಕರ್ನಾಟಕ ಚುನಾವಣೆಯಲ್ಲಿ ಗೆದ್ದು ಸರ್ಕಾರ ರಚಿಸುತ್ತೇವೆ, ಯಾರೂ ನಿಲ್ಲಿಸಲು ಸಾಧ್ಯವಿಲ್ಲ: ರಾಹುಲ್ ಗಾಂಧಿ ವಿಶ್ವಾಸ

By

Published : Apr 28, 2023, 6:15 PM IST

''ಬಿಜೆಪಿ ನಾಯಕರ ಇಚ್ಚಾಶಕ್ತಿ ಕೊರತೆಯಿಂದ 371ಜೆ ವಿಧೇಯಕ ಸಮರ್ಪಕ ಜಾರಿ ಆಗಿಲ್ಲ. ರಾಜ್ಯದಲ್ಲಿ 50 ಸಾವಿರ ಹುದ್ದೆಗಳು ಖಾಲಿ ಉಳಿದಿವೆ. ಈ ಹುದ್ದೆಗಳನ್ನು ನಾವು ಭರ್ತಿ ಮಾಡುತ್ತೇವೆ'' ಎಂದು ರಾಹುಲ್ ಗಾಂಧಿ ಹೇಳಿದರು.

Congress Leader Rahul Gandhi
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾತನಾಡಿದರು.

ಕಲಬುರಗಿ:"ನಾವು ಕರ್ನಾಟಕ ಚುನಾವಣೆಯಲ್ಲಿ ಗೆದ್ದು ಸರ್ಕಾರವನ್ನು ರಚಿಸುತ್ತೇವೆ. ಇದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಬಿಜೆಪಿಗೆ 40 ನಂಬರ್ ಅಂದ್ರೆ ಹೆಚ್ಚು ಪ್ರೀತಿಯಿದ್ದು, ಇದರಿಂದ ಕರ್ನಾಟಕ ಜನರು ಬಿಜೆಪಿಗೆ ಕೇವಲ 40 ಸ್ಥಾನಗಳನ್ನು ನೀಡುತ್ತಾರೆ. ಕಾಂಗ್ರೆಸ್ ಪಕ್ಷ ಕನಿಷ್ಠ ಅಂದ್ರು 150 ಸ್ಥಾನಗಳನ್ನು ಪಡೆಯುತ್ತದೆ'' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲೆಯ 9 ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಪ್ರಚಾರಕ್ಕಾಗಿ ಜೇವರ್ಗಿಯ ಧರ್ಮಸಿಂಗ್ ಕ್ರಿಡಾಂಗಣದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಅವರು ಮಾತನಾಡಿದರು. ''ಬಿಜೆಪಿ ನಾಯಕರ ಇಚ್ಚಾಶಕ್ತಿ ಕೊರತೆಯಿಂದ 371ಜೆ ವಿಧೇಯಕ ಸಮರ್ಪಕ ಜಾರಿ ಆಗಿಲ್ಲ. ರಾಜ್ಯದಲ್ಲಿ 50 ಸಾವಿರ ಹುದ್ದೆಗಳು ಖಾಲಿ ಉಳಿದಿವೆ. ಈ ಹುದ್ದೆಗಳನ್ನು ನಾವು ಭರ್ತಿ ಮಾಡುತ್ತೇವೆ. ಐಐಟಿ ಮತ್ತು ಐಐಎಂಗಳು ಬರುವಂತೆ ನೋಡುಕೊಳ್ಳುತ್ತೇವೆ. ಶಿಕ್ಷಣ ಕ್ಷೇತ್ರಕ್ಕೆ ವಿಶೇಷ ನೀತಿಯನ್ನು ನಾವು ಜಾರಿಗೊಳಿಸುತ್ತೇವೆ. ರಾಜ್ಯದ ಜನತೆಗೆ ಹಲವಾರು ಪ್ರಯೋಜನಗಳನ್ನು ನೀಡುತ್ತೇವೆ ಎಂದು ರಾಹುಲ್ ಗಾಂಧಿ ಭರವಸೆ ನೀಡಿದರು.

ಪ್ರತಿಯೊಂದು ಗ್ರಾಪಂಗೂ 1 ಕೋಟಿ ರೂ. ಅನುದಾನ:''ಪ್ರತಿ ಗ್ರಾಮ ಪಂಚಾಯತಿಗಳಿಗೆ 1 ಕೋಟಿ ರೂ. ಅನುದಾನ ಕೊಡಲಿದ್ದೇವೆ. ಗ್ಯಾರಂಟಿ ಕಾರ್ಡ್ ಮೂಲಕ‌ ನೀಡಲಾದ ನಾಲ್ಕು ಆಶ್ವಾಸನೆ ಮೊದಲು ಜಾರಿಗೆ ತಂದು ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇವೆ. ಆದ್ರೆ ಶೇ 40ರಷ್ಟು ಸರ್ಕಾರ ಇಂತಹ ಗ್ಯಾರಂಟಿಗಳನ್ನು ಕೊಡಲು ಸಾಧ್ಯವಿಲ್ಲ. ಏಕೆಂದರೆ ಸಿಎಂ ಆಗಬೇಕು ಎಂದರೆ ಬಿಜೆಪಿ ಶಾಸಕರೇ 2,500 ಕೋಟಿ‌ ರೂ. ಕೊಡಬೇಕು. ಇದು ಬಡವರ, ಹಿಂದುಳಿದವರ ಸರ್ಕಾರ ಅಲ್ಲ'' ಎಂದು ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದರು.‌ ಮಳೆಯಲ್ಲೇ ನಿಂತು ಭಾಷಣ ಆಲಿಸಿದ ಜನರಿಗೆ ಧನ್ಯವಾದವನ್ನೂ ಕೂಡಾ ಹೇಳಿದರು.

ವರುಣ ಅಬ್ಬರದ ನಡುವೆಯೇ ರಾಹುಲ್ ಗಾಂಧಿ‌ ಭಾಷಣ:ಆಗಮನಕ್ಕೂ‌‌ ಮುನ್ನವೇ ವರುಣ ಅಬ್ರರ ಜೋರಾಗಿತ್ತು. ಗಾಳಿ‌ ಸಹಿತ ಮಳೆಗೆ ಪೆಂಡಾಲ್ ಕಿತ್ತುಕೊಂಡು ಹೋಯಿತು. ಈ ವೇಳೆ ಮಳೆ ಹೊಡೆತಕ್ಕೆ ನೆರೆದಿದ್ದ ಜನರು ಕಂಗಾಲಾದರು. ವಿಧಿಯಿಲ್ಲದೇ ತೆಲೆ ಮೇಲೆ ಖುರ್ಚಿ ಇಟ್ಟುಕೊಂಡು ವೇದಿಕೆ ಮುಂಭಾಗದಲ್ಲಿ ನಿಂತರು. ಮಳೆ ನಿರೋಧಕ‌ ಪೆಂಡಾಲ್​ನಲ್ಲಿ ಕೆಲವರು ನಿಂತುಕೊಂಡರು. ಜನರಿಗೆ ಆಗುತ್ತಿದ್ದ ತೊಂದರೆ ಕಂಡು, ವೇದಿಯಿಂದ ಮಳೆಯಲ್ಲಿಯೇ ಓಡೋಡಿ ಬಂದ ಜೇವರ್ಗಿ ಶಾಸಕ ಹಾಗೂ ಅಭ್ಯರ್ಥಿ ಡಾ.ಅಜಯಸಿಂಗ್ ಅವರು, ಜನರ ಬಳಿ ಬಂದು ಕ್ಷಮೆ ಕೋರಿದರು. ಜನರೊಂದಿಗೆ ಮಳೆಯಲ್ಲಿಯೇ ನಿಂತು, ತಾವೂ‌ ಕೂಡಾ ನೆನೆದರು.

ಮಳೆ ಶುಭ ಸಂಕೇತ:ಮಳೆ ಶುಭ ಸಂಕೇತ ಜೇವರ್ಗಿ ಜನ ಇಂತಹ ಮಳೆಗಾಳಿಗೆ ಹೇದರುವವರಲ್ಲ ಎಂದು ಕಾಂಗ್ರೆಸ್​ ಅಧ್ಯರ್ಥಿಗಳು ಮತದಾರರನ್ನು ಹುರುದುಂಬಿಸಿದರು. ರಾಹುಲ್ ಗಾಂಧಿ‌ ಆಗಮಿಸಿದ ಹೆಲಿಕ್ಯಾಪ್ಟರ್ ಹವಮಾನ‌ ವೈಪರಿತ್ಯದಿಂದ ಜೇವರ್ಗಿಯಲ್ಲಿ ಲ್ಯಾಂಡ್ ಮಾಡಲು‌ ಸಾಧ್ಯವಾಗಲಿಲ್ಲ. ಮರಳಿ ಕಲಬುರಗಿಗೆ ಹೋಗಿ ಸುಮಾರು 50 ಕಿ.ಮೀ. ರಸ್ತೆ ಮೂಲಕ ಆಗಮಿಸಿ ಸಮಾವೇಶದಲ್ಲಿ ಪಾಲ್ಗೊಂಡರು. ಮಳೆ ಲೆಕ್ಕಿಸದೇ ರಾಹುಲ್ ಗಾಂಧಿ ಜನರತ್ತ ಕೈಬಿಸಿ ಹುರುದಬಿಸಿದರು. 10 ನಿಮಿಷ ಭಾಷಣ ಮಾಡಿ, ಬಿಜೆಪಿ ವಿರುದ್ಧ ಹರಿಹಾಯ್ದರು.

ಇದನ್ನೂ ಓದಿ:ಹುಬ್ಬಳ್ಳಿ - ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಕಿಚ್ಚ ಸುದೀಪ್ ಭರ್ಜರಿ ಮತ ಬೇಟೆ

ABOUT THE AUTHOR

...view details