ಕಲಬುರಗಿ : ಚಿತ್ತಾಪುರ ತಾಲೂಕಿನ ರಾವೂರ್ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಿರ್ಮಿಸಲಾದ ನೀರಿನ ಟ್ಯಾಂಕ್ ಶಿಥಿಲಗೊಂಡಿದ್ದು ಶಿಕ್ಷಕರು ಹಾಗೂ ಮಕ್ಕಳಲ್ಲಿ ಆತಂಕ ಮನೆಮಾಡಿದೆ.
ಶಿಥಿಲಾವಸ್ಥೆ ತಲುಪಿದ ನೀರಿನ ಟ್ಯಾಂಕ್, ಶಾಲಾ ಮಕ್ಕಳಲ್ಲಿ ಭಯ - Water Tank Problem news In Kalaburgi
ಚಿತ್ತಾಪುರ ತಾಲೂಕಿನ ರಾವೂರ್ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಿರ್ಮಿಸಲಾದ ನೀರಿನ ಟ್ಯಾಂಕ್ ಶಿಥಿಲಗೊಂಡಿದ್ದು ಶಿಕ್ಷಕರು ಹಾಗೂ ಮಕ್ಕಳಲ್ಲಿ ಆತಂಕ ಮನೆಮಾಡಿದೆ.
![ಶಿಥಿಲಾವಸ್ಥೆ ತಲುಪಿದ ನೀರಿನ ಟ್ಯಾಂಕ್, ಶಾಲಾ ಮಕ್ಕಳಲ್ಲಿ ಭಯ Water Tank Danger Zone In Kalaburgi](https://etvbharatimages.akamaized.net/etvbharat/prod-images/768-512-5342545-thumbnail-3x2-dr.jpg)
ಶಿಥಿಲಾವಸ್ಥೆ ತಲುಪಿದ ಟ್ಯಾಂಕ್ : ಭಯದಲ್ಲಿ ಶಾಲಾ ಮಕ್ಕಳು
ಶಿಥಿಲಾವಸ್ಥೆ ತಲುಪಿದ ನೀರಿನ ಟ್ಯಾಂಕ್ : ಭಯದಲ್ಲಿ ಶಾಲಾ ಮಕ್ಕಳು
ಕಳೆದ ಹಲವು ವರ್ಷಗಳ ಹಿಂದೆ ನಿರ್ಮಿಸಿರುವ ಓವರ್ ಹೆಡ್ ಟ್ಯಾಂಕ್ ಸಂರ್ಪೂಣ ಶಿಥಿಲಾವಸ್ಥೆ ತಲುಪಿದ್ದು, ಟ್ಯಾಂಕ್ ಪಿಲ್ಲರ್‌ಗಳು ಬಿರುಕು ಬಿಟ್ಟಿವೆ. ಟ್ಯಾಂಕ್ ಸಿಮೆಂಟ್ ಕಿತ್ತು ಬೀಳುತ್ತಿದ್ದು ಟ್ಯಾಂಕ್‌ನ ಅಕ್ಕಪಕ್ಕದಲ್ಲಿ ಮಕ್ಕಳು ಆಟವಾಡುತ್ತಿರುತ್ತಾರೆ. ಟ್ಯಾಂಕ್ ಈಗಲೋ ಆಗಲೋ ಬೀಳುವ ಭೀತಿ ಇಲ್ಲಿನ ನಿವಾಸಿಗಳನ್ನು ಕಾಡುತ್ತಿದೆ. ಈ ಕುರಿತು ಹಲವು ಬಾರಿ ಗ್ರಾಮ ಪಂಚಾಯತ್ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪೋಷಕರು ಆರೋಪಿಸಿದ್ದಾರೆ.