ಕಲಬುರಗಿ:ಮಹಾರಾಷ್ಟ್ರದ ವೀರ್ ಜಲಾಶಯದಿಂದ ಭೀಮಾ ನದಿಗೆ 1.20 ಲಕ್ಷ ಕ್ಯೂಸೆಕ್ಗೂ ಅಧಿಕ ನೀರು ಬಿಡುಗಡೆ ಮಾಡಲಾಗಿದೆ. ಜಿಲ್ಲೆಯ ಭೀಮಾ ನದಿ ಪಾತ್ರದ ಗ್ರಾಮಸ್ಥರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಸೂಚಿಸಿದ್ದಾರೆ.
ಹರಿಬಿಟ್ಟ ನೀರು ಕಲಬುರಗಿ ಜಿಲ್ಲೆಗೆ ತಲುಪಲು ಸುಮಾರು 25 ರಿಂದ 30 ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಈ ನೀರಿನಿಂದ ಸದ್ಯ ಭೀಮಾ ನದಿಯ ಅಕ್ಕಪಕ್ಕದ ಗ್ರಾಮಗಳಿಗೆ ಯಾವುದೇ ರೀತಿಯ ಪ್ರವಾಹ ಉಂಟಾಗುವುದಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ ಅಫಜಲಪುರ, ಜೇವರ್ಗಿ, ಚಿತ್ತಾಪೂರ ಹಾಗೂ ಕಲಬುರಗಿ ತಾಲೂಕಿನ ಜನರು ಭೀಮಾ ನದಿ ತೀರ ಹಾಗೂ ಸನ್ನತಿ ಬ್ರಿಡ್ಜ್ ಕಂ ಬ್ಯಾರೇಜ್ ಕಡೆಗೆ ಹೋಗಬಾರದು. ಜಾನುವಾರುಗಳನ್ನು ಸಹ ಬಿಡದಂತೆ ಜಿಲ್ಲಾಧಿಕಾರಿ ಕೋರಿದ್ದಾರೆ.