ಕಲಬುರಗಿ:ಮಹಾರಾಷ್ಟ್ರದ ವೀರ್ ಹಾಗೂ ಉಜ್ಜನಿ ಡ್ಯಾಮ್ ನಿಂದ ಭೀಮಾ ನದಿಗೆ ನೀರು ಹರಿಬಿಡಲಾಗುತ್ತಿದ್ದು, ಅಫಜಲಪುರ ತಾಲೂಕಿನ ಸೊನ್ನ ಬ್ಯಾರೇಜ್ ಸಂಪೂರ್ಣ ಭರ್ತಿಯಾಗಿದೆ.
ಕಲಬುರಗಿ : ಅಫಜಲಪುರ ತಾಲೂಕಿನ ಸೊನ್ನ ಬ್ಯಾರೇಜ್ ಸಂಪೂರ್ಣ ಭರ್ತಿ - Sonna barrage full
ಕಲಬುರಗಿಯ ಅಫಜಲಪುರ ತಾಲೂಕಿನ ಸೊನ್ನ ಬ್ಯಾರೇಜ್ ಸಂಪೂರ್ಣ ಭರ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ಬ್ಯಾರೀಜ್ ಕಳೆಭಾಗದ ಜನರಿಗೆ ಮುನ್ನೆಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.
ಸೊನ್ನ ಬ್ಯಾರೇಜ್
ಸೊನ್ನ ಬ್ಯಾರೇಜ್‌ಗೆ ವೀರ್ ಹಾಗೂ ಉಜ್ಜನಿ ಡ್ಯಾಮ್ ದಿಂದ 25,000 ಕ್ಯೂಸೆಕ್ಸ್ ನೀರು ಒಳಹರಿವಿದ್ದು, ಸೊನ್ನ ಬ್ಯಾರೇಜ್ ದಿಂದ ಅಷ್ಟೆ ಪ್ರಮಾಣದ ನೀರು ಭೀಮಾನದಿಗೆ ಹರಿಬಿಡಲಾಗುತ್ತಿದೆ. ಮುಂದಿನ ನಾಲ್ಕೈದು ದಿನಗಳ ಕಾಲ ಹೆಚ್ಚಿನ ನೀರು ಹರಿದು ಬರುವ ಸಾಧ್ಯತೆಯಿದ್ದು,ಅಷ್ಟೇ ಪ್ರಮಾಣದ ನೀರು ಹೊರಗೆ ಬಿಡಲಾಗುತ್ತದೆ.
ಈ ಹಿನ್ನೆಲೆಯಲ್ಲಿ ಬ್ಯಾರೇಜ್ ಕೆಳಭಾಗದ ಗ್ರಾಮಗಳ ರೈತರು ಹಾಗೂ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ಕೆಎನ್ಎನ್ಎಲ್ ಕಾರ್ಯಪಾಲಕ ಅಭಿಯಂತರ ಅಶೋಕ್ ಕಲಾಲ್ ಮನವಿ ಮಾಡಿದ್ದಾರೆ: