ಕಲಬುರಗಿ:ಪ್ರೀತಿ-ಪ್ರೇಮ ಎಂದು ಯುವತಿ ಹಿಂದೆ ಬಿದ್ದಿದ್ದ ಯುವಕನನ್ನ ಹತ್ಯೆಗೈದಿರುವ ಪ್ರಕರಣ ಅಫಜಲಪುರ ತಾಲೂಕಿನ ರೇವೂರು ಗ್ರಾಮದ ಬಳಿ ನಡೆದಿದೆ. ಹುಲ್ಲೂರು ಗ್ರಾಮದ ನಿವಾಸಿ ಚಂದ್ರಪ್ಪ (24) ಕೊಲೆಯಾದ ಯುವಕ. ಕಳೆದ ಕೆಲ ದಿನಗಳಿಂದ ಯುವತಿಯನ್ನ ಪ್ರೀತಿ ಮಾಡುತ್ತಿದ್ದ ಚಂದ್ರಪ್ಪ ಆಕೆಯನ್ನು ಹಲವಡೆ ಸುತ್ತಾಡಿಸಿದ್ದ ಎನ್ನಲಾಗ್ತಿದೆ.
ಕಲಬುರಗಿಯಲ್ಲಿ ಯುವಕನ ಹತ್ಯೆ.. ಯುವತಿಯ ಹಿಂದೆ ಬಿದ್ದಿದ್ದಕ್ಕೆ ಕೊಲೆ ಶಂಕೆ - ಕಲಬುರಗಿಯಲ್ಲಿ ಚಂದ್ರಪ್ಪ ಎಂಬ ಯುವಕನ ಹತ್ಯೆ
ಕಲಬುರಗಿ ಜಿಲ್ಲೆಯಲ್ಲಿ ಹರಿದ ನೆತ್ತರು-ಯುವಕನ ಕೊಲೆ- ಪ್ರೀತಿ ಪ್ರೇಮ ಅಂತಾ ಯುವತಿ ಹಿಂದೆ ಬಿದ್ದಿದ್ದಕ್ಕೆ ಹತ್ಯೆ ಶಂಕೆ
ಕಲಬುರಗಿ
ಇವರ ಪ್ರೀತಿ ಬಗ್ಗೆ ತಿಳಿದ ಯುವತಿಯ ಪೋಷಕರು ಕರೆದು ಬುದ್ಧಿವಾದ ಹೇಳಿದ್ದರಂತೆ. ಅದ್ರೂ ಚಂದ್ರಪ್ಪ ತನ್ನ ಪ್ರೀತಿಯನ್ನು ಮುಂದುವರೆಸಿದ್ದನಂತೆ. ಇದರಿಂದಾಗಿ ರೊಚ್ಚಿಗೆದ್ದ ಯುವತಿ ಕಡೆಯವರು ಚಂದ್ರಪ್ಪನನ್ನ ಕೊಲೆಗೈದಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಸದ್ಯ ಈ ಕುರಿತು ರೇವೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.
ಇದನ್ನೂ ಓದಿ:ಬೆಂಗಳೂರಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ ಕಿಡಿಗೇಡಿಗೆ ಥಳಿತ: ಯುವತಿ ರಕ್ಷಿಸಿದ ತೃತೀಯ ಲಿಂಗಿಗಳು