ಕಲಬುರಗಿ: ಜಿಲ್ಲಾಸ್ಪತ್ರೆಯಲ್ಲಿ ಹಂದಿಗಳ ಹಿಂಡು ಬಿಂದಾಸ್ ಆಗಿ ಓಡಾಟ ನಡೆಸುತ್ತಿರುವ ದೃಶ್ಯ ಕಂಡುಬಂದಿದೆ. ಜಿಲ್ಲಾಸ್ಪತ್ರೆಯ ದಿವ್ಯ ನಿರ್ಲಕ್ಷ್ಯವೇ ಆಸ್ಪತ್ರೆಯ ಈ ಅವ್ಯವಸ್ಥೆಗೆ ಕಾರಣ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಂದಿಗಳು ಸಾರ್ ಹಂದಿಗಳು.. ಜಿಲ್ಲಾಸ್ಪತ್ರೆಯಲ್ಲಿ ಹಂದಿಗಳ ಹಿಂಡು! - Kalaburgi District hospital
ಆಸ್ಪತ್ರೆ ಸಿಬ್ಬಂದಿ ಹಂದಿಗಳ ಓಡಾಟ ನೋಡಿಯೂ ನೋಡದಂತೆ ಕುಳಿತಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಹಂದಿಗಳ ಹಿಂಡು ಬಿಂದಾಸ್ ಓಡಾಟ
ಕೋವಿಡ್ ಆಸ್ಪತ್ರೆ ಪಕ್ಕದಲ್ಲೇ ಈ ಆಸ್ಪತ್ರೆ ಇದ್ದು, ಅಧಿಕಾರಿಗಳು ಸರಿಯಾದ ವ್ಯವಸ್ಥೆ ಮಾಡದೆ ಬೇಜವಾಬ್ದಾರಿತನ ಮೆರೆದಿದ್ದಾರೆ ಎಂದು ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಕಿಡಿ ಕಾರಿದ್ದಾರೆ.
ಆಸ್ಪತ್ರೆ ಸಿಬ್ಬಂದಿಗಳು ಹಂದಿಗಳ ಓಡಾಟ ಕಂಡು ಕಾಣದಂತೆ ಕುಳಿತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.