ಕರ್ನಾಟಕ

karnataka

ETV Bharat / state

ಗೋವಾದಲ್ಲಿ ಸಿಲುಕಿಕೊಂಡಿರುವ ಚಿಂಚೋಳಿಯ ಕೂಲಿ ಕಾರ್ಮಿಕರು: ಊಟ-ತಿಂಡಿ ತ್ಯಜಿಸುವ ಎಚ್ಚರಿಕೆ! - corona latest news

ಗೋವಾದ ಬಿಚ್ಚೋಲಿಯಲ್ಲಿ ಸಿಲುಕಿಕೊಂಡಿರುವ ಜಿಲ್ಲೆಯ ಚಿಂಚೋಳಿ ತಾಲೂಕಿನ 150 ಜನ ಕೂಲಿ ಕಾರ್ಮಿಕರು, ನಮ್ಮನ್ನ ವಾಪಸ್ ಕರೆಯಿಸಿಕೊಳ್ಳಿ. ಇಲ್ಲದಿದ್ದರೆ ನಾವು ಉಪವಾಸ‌ ಸಾಯೋದು ಗ್ಯಾರೆಂಟಿ ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

wage-laborers
ಗೋವಾದಲ್ಲಿ ಸಿಲುಕಿಕೊಂಡಿರುವ ಕೂಲಿ ಕಾರ್ಮಿಕರು

By

Published : Apr 15, 2020, 6:56 PM IST

ಕಲಬುರಗಿ:ಲಾಕ್​ಡೌನ್​ನಿಂದಾಗಿ ಗೋವಾದಲ್ಲಿ ಸಿಲುಕಿಕೊಂಡಿರುವ ಕಲಬುರಗಿಯ 150 ಮಂದಿ ಕೂಲಿ ಕಾರ್ಮಿಕರು ಅನ್ನ, ನೀರು ತ್ಯೆಜಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಗೋವಾದ ಬಿಚ್ಚೋಲಿಯಲ್ಲಿ ಸಿಲುಕಿಕೊಂಡಿರುವ ಜಿಲ್ಲೆಯ ಚಿಂಚೋಳಿ ತಾಲೂಕಿನ 150 ಜನ ಕೂಲಿ ಕಾರ್ಮಿಕರು, ನಮ್ಮನ್ನ ವಾಪಸ್ ಕರೆಯಿಸಿಕೊಳ್ಳಿ. ಇಲ್ಲದಿದ್ದರೆ ನಾವು ಉಪವಾಸ‌ ಸಾಯೋದು ಗ್ಯಾರೆಂಟಿ ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೆ ಗೋವಾ ಸರ್ಕಾರ ನೀಡಿದ ಊಟ ವಾಪಸ್ ಕಳುಹಿಸಿ ಉಪವಾಸ ಮಾಡುತ್ತಿರುವ ಬಗ್ಗೆ ವಿಡಿಯೋ ರವಾನಿಸಿದ್ದಾರೆ.

ಗೋವಾದಲ್ಲಿ ಸಿಲುಕಿಕೊಂಡಿರುವ ಕೂಲಿ ಕಾರ್ಮಿಕರು

ನಮ್ಮನ್ನು ವಾಪಸ್ ಕರೆಯಿಸಿಕೊಳ್ಳುವಂತೆ ಪಟ್ಟು ಹಿಡಿದು ಕೂತ ಜನರು, ನಾವು ಉಪವಾಸದಿಂದ‌ ಸಾವನ್ನಪ್ಪಿದ್ರೆ ಅದಕ್ಕೆ ಕಾರಣ ಸಿಎಂ‌ ಬಿಎಸ್‌ವೈ ಎಂದು ಎಚ್ಚರಿಕೆ ನೀಡಿದ್ದಾರೆ.

ABOUT THE AUTHOR

...view details