ಕಲಬುರಗಿ: ಕಲಬುರಗಿ ಮೀಸಲು ಲೋಕಸಭಾ ಕ್ಷೇತ್ರದ ಚುನಾವಣೆಯ ಸಾಮಾನ್ಯ ವೀಕ್ಷಕರಾದ ಪಶ್ಚಿಮ ಬಂಗಾಳದ ಐಎಎಸ್ ಅಧಿಕಾರಿ ಪರ್ವೇಜ್ ಅಹ್ಮದ್ ಸಿದ್ಧಿಕಿ ಅವರು ಶುಕ್ರವಾರ ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ್ ಜೊತೆ ನಗರದ ವಿಶ್ವವಿದ್ಯಾಲಯಕ್ಕೆ ತೆರಳಿ ಮತ ಎಣಿಕಾ ಕೇಂದ್ರಗಳ ಸಿದ್ಧತೆಗಳ ಪರಿಶೀಲನೆ ನಡೆಸಿದರು.
ಮತ ಎಣಿಕೆ ಕೇಂದ್ರಗಳಿಗಾಗಿ ಈಗಲೇ ಸಿದ್ಧತೆ....ವ್ಯವಸ್ಥೆ ಪರಿಶೀಲಿಸಿದ ಅಧಿಕಾರಿಗಳು! - Checking
ಶುಕ್ರವಾರ ನಗರದ ವಿಶ್ವವಿದ್ಯಾಲಯಕ್ಕೆ ತೆರಳಿದ ಚುನಾವಣೆಯ ಸಾಮಾನ್ಯ ವೀಕ್ಷಕರಾದ ಪಶ್ಚಿಮ ಬಂಗಾಳದ ಐಎಎಸ್ ಅಧಿಕಾರಿ ಪರ್ವೇಜ್ ಅಹ್ಮದ್, ಮತ ಎಣಿಕೆ ಸಿದ್ಧತೆಗಳ ಪರಿಶೀಲನೆ ನಡೆಸಿದರು.
ವಿವಿಯ ವಿವಿಧ ವಿಭಾಗಗಳಲ್ಲಿ ಮತ ಎಣಿಕೆ ನಡೆಯಲಿದ್ದು, ಈ ಕೇಂದ್ರಗಳ ಸಿದ್ಧತೆಗಳನ್ನು ವೀಕ್ಷಿಸಿದರು. ಅಲ್ಲದೆ ಈಗಾಗಲೇ ಆಯಾ ಮತ ಎಣಿಕೆ ಕೇಂದ್ರಗಳಿಗೆ ಹೊಂದಿಕೊಂಡಂತೆ ಸ್ಟ್ರಾಂಗ್ ರೂಂಗಳ ಸಿದ್ಧಗೊಳಿಸಲಾಗುತ್ತಿದ್ದು ಈ ಕೊಠಡಿಗಳಿಗೆ ಕಿಟಕಿ ಮುಂತಾದವುಗಳನ್ನು ಇಟ್ಟಿಗೆಗಳ ಮೂಲಕ ಮುಚ್ಚಿ ಭದ್ರಪಡಿಸುವ ಕಾರ್ಯ ನಡೆಯುತ್ತಿರುವುದನ್ನು ವೀಕ್ಷಕರು ಪರಿಶೀಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಡಿ.ಎಂ. ಮದರಿ, ಪ್ರೊಬೇಷನರಿ ಐಎಎಸ್ ಅಧಿಕಾರಿ ಸ್ನೇಹಲ್ ಸುಧಾಕರ್ ಲೋಖಂಡೆ, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ಅಮೀನ್ ಮುಖ್ತಾರ್, ಶಿಷ್ಟಾಚಾರ ತಹಸೀಲ್ದಾರ್ ಪ್ರಕಾಶ್ ಚಿಂಚೋಳಿಕರ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.