ಕಲಬುರಗಿ:ಮಹಾನಗರ ಪಾಲಿಕೆಗೆ ಮತದಾನ ಪ್ರಕ್ರಿಯೆ ನಡೆಯುತ್ತಿದ್ದು, ಉತ್ತರ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಖನೀಜ್ ಫಾತಿಮಾ ನಗರದ ಪಿಡಬ್ಲೂಡಿ ಹೊಸ ಕಚೇರಿಯಲ್ಲಿ ವಾರ್ಡ್ ಸಂಖ್ಯೆ 50ರ ಮತಗಟ್ಟೆ ಸಂಖ್ಯೆ 427ರಲ್ಲಿ ತಮ್ಮ ಹಕ್ಕು ಚಲಾಯಿಸಿದರು.
ಮತದಾನದ ಬಳಿಕ ಮಾತನಾಡಿದ ಶಾಸಕಿ ಖನಿಸಾ ಫಾತಿಮಾ, ಮಾಜಿ ಸಚಿವ, ತಮ್ಮ ಪತಿ ಖಮರುಲ್ ಇಸ್ಲಾಂ ಮರಣದ ನಂತರ ಇದು ಮೊದಲನೇ ಪಾಲಿಕೆ ಚುನಾವಣೆಯಾಗಿದೆ. ಅವರ ಮರಣದಿಂದ ಈ ಚುನಾವಣೆಯಲ್ಲಿ ಒಂದಿಷ್ಟು ಹಿನ್ನಡೆಯಾಗಿದೆ. ಆದರೂ ಪತಿಯ ಹಾದಿಯಲ್ಲಿಯೇ ಚುನಾವಣೆ ಗೆಲ್ಲಲು ಪ್ರಯತ್ನ ಮಾಡಲಾಗುತ್ತಿದ್ದು, ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಹಿಡಿಯುವ ವಿಶ್ವಾಸ ಇದೆ ಎಂದರು.
ಬಿಜೆಪಿ ವಾಮಮಾರ್ಗ ಅನುಸರಿಸಿ ಚುನಾವಣೆ ಗೆಲ್ಲುವ ಪ್ರಯತ್ನ ಮಾಡುತ್ತಿದೆ. ಬಿಜೆಪಿ ಏನೇ ಮಾಡಿದರೂ ನಾವು ಬಹುಮತದೊಂದಿಗೆ ಕಲಬುರಗಿ ಪಾಲಿಕೆಯಲ್ಲಿ ಅಧಿಕಾರ ಹಿಡಿಯುತ್ತೇವೆ ಎಂದು ಶಾಸಕಿ ಹೇಳಿದರು.