ಕಲಬುರಗಿ:ಕಲಬುರಗಿ ದಕ್ಷಿಣ ಮತಕ್ಷೇತ್ರದ ಬಿಜೆಪಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ವಾರ್ಡ್ ಸಂಖ್ಯೆ 24ರ, ಎಲ್‌ಐಸಿ ಆಫೀಸ್ ಮತಗಟ್ಟೆ ಸಂಖ್ಯೆ 196ರಲ್ಲಿ ಮತದಾನ ಮಾಡಿದ್ದಾರೆ.
ಕಲಬುರಗಿಯ ಸುಮಾರು 40 ವರ್ಷಗಳ ಕಾಂಗ್ರೆಸ್ ಅಧಿಕಾರದಿಂದ ಜನತೆ ಬೇಸತ್ತಿದ್ದಾರೆ. ಕಲಬುರಗಿಯಲ್ಲಿ ಬದಲಾವಣೆ ಬಯಸಿದ ಜನ ಬಿಜೆಪಿಗೆ ಆರ್ಶೀವಾದ ಮಾಡುವ ವಾತಾವರಣ ಇದೆ. ಮೋದಿ, ಬಿಎಸ್ವೈ, ಬೊಮ್ಮಾಯಿ ಅವರ ಆಡಳಿತ ಮೆಚ್ಚಿ ಬಿಜೆಪಿ ಕಲಬುರಗಿಯಲ್ಲಿ ಬಹುಮತ ಪಡೆಯುವ ವಿಶ್ವಾಸವಿದೆ ಎಂದಿದ್ದಾರೆ.
ಮತಗಟ್ಟೆಗೆ ಆಗಮಿಸಿ ಹಕ್ಕು ಚಲಾಯಿಸಿದ ವೃದ್ಧೆ 75ರ ಅಂಧ ವೃದ್ಧೆ ಮತದಾನ
ಮಹಾನಗರ ಪಾಲಿಕೆ ಚುನಾವಣೆ ಪ್ರಕ್ರಿಯೆ ಆರಂಭವಾಗಿದ್ದು, ಹಿರಿಯ ವಯಸ್ಕರು ಮತದಾನದಲ್ಲಿ ಹೆಚ್ಚಿನ ಹುಮ್ಮಸ್ಸು ತೋರುತ್ತಿದ್ದಾರೆ. ಅಂಧ ವೃದ್ಧೆಯೋರ್ವರು ಮತದಾನ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಒಂದು ಕಡೆ 10 ಗಂಟೆಯಾದರೂ ಮತದಾನ ಪ್ರಕ್ರಿಯೆ ಆಮೆಗತಿಯಲ್ಲಿ ಸಾಗುತ್ತಿದೆ. ಇನ್ನೊಂದೆಡೆ ಹೆಚ್ಚಿನ ಸಂಖ್ಯೆಯಲ್ಲಿ ಹಿರಿಯ ಜೀವಿಗಳು ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸುವ ಮೂಲಕ ಮತದಾನದ ಮಹತ್ವ ಸಾರುವ ಕಾರ್ಯ ಮಾಡಿದ್ದಾರೆ.
ಕಲಬುರಗಿ ನಗರದ ವಾರ್ಡ್ ನಂಬರ್ 36ರ ಮತಗಟ್ಟೆ ಸಂಖ್ಯೆ 117ರಲ್ಲಿ 75 ವರ್ಷದ ರಾಣಮ್ಮ ಎಂಬಾಕೆ ಸೊಸೆಯ ಸಹಾಯದೊಂದಿಗೆ ಮತಗಟ್ಟೆಗೆ ಆಗಮಿಸಿ ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.