ಕಲಬುರಗಿ:ಮತದಾರನೋರ್ವ ಮತ ಚಲಾಯಿಸಿ ಬ್ಯಾಲೆಟ್ ಪೇಪರ್ ಫೋಟೋ ಕ್ಲಿಕ್ಕಿಸಿರುವ ಘಟನೆ ಕಲಬುರಗಿ ತಾಲೂಕಿನ ಜಂಬಗಾ(ಬಿ) ಗ್ರಾಮದಲ್ಲಿ ನಡೆದಿದೆ.
ಮತ ಚಲಾಯಿಸಿ ಬ್ಯಾಲೆಟ್ ಪೇಪರ್ ಫೋಟೋ ತೆಗೆದು ಅಂತರ್ಜಾಲದಲ್ಲಿ ಹರಿಬಿಟ್ಟ ಮತದಾರ! - ಕಲಬುರಗಿಯಲ್ಲಿ ಬ್ಯಾಲೆಟ್ ಪೇಪರ್ ವೈರಲ್

12:12 December 22
ಮತದಾರನೋರ್ವ ಮತ ಚಲಾಯಿಸಿದ ಬಳಿಕ ಬ್ಯಾಲೆಟ್ ಪೇಪರ್ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ.
ಕಲ್ಲಗರಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಜಂಬಗಾ (ಬಿ) ಗ್ರಾಮದಲ್ಲಿ ಮತದಾರ ತೆಗೆದುಕೊಂಡು ಬಂದ ಫೋಟೋವನ್ನು ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಮತ ಕೇಂದ್ರದಲ್ಲಿ ಮೊಬೈಲ್ ನಿಷೇಧ ಮಾಡಿದರೂ ಸಹ ಈ ರೀತಿ ಉದ್ಧಟತನ ಮೆರೆದಿದ್ದಾರೆ. ವೋಟ್ ಹಾಕಿ ನಂತರ ಬ್ಯಾಲೆಟ್ ಪೇಪರ್ ಫೋಟೋ ಕ್ಲಿಕ್ಕಿಸಿರುವುದು ಜಿಲ್ಲಾ ಪೊಲೀಸರಿಗೆ ಹಾಗೂ ಚುನಾವಣಾಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿದೆ.
ಸದ್ಯ ಫೋಟೋ ತೆಗೆದುಕೊಂಡು ಬಂದವರು ಯಾರು? ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟವರು ಯಾರು? ಎಂದು ಪತ್ತೆ ಹಚ್ಚುವ ಕಾರ್ಯ ಮುಂದುವರಿದಿದೆ.
ಇದನ್ನೂ ಓದಿ:ಗೃಹ ಕಚೇರಿಯಲ್ಲಿ ಆಟೋ ಏರಿದ ಸಿಎಂ ಯಡಿಯೂರಪ್ಪ