ಕರ್ನಾಟಕ

karnataka

ETV Bharat / state

ನಿಷೇಧಾಜ್ಞೆ ಉಲ್ಲಂಘಿಸಿದವರನ್ನು ಸ್ವಯಂ ಸೇವಕರನ್ನಾಗಿ ಬಳಸಿಕೊಳ್ಳಲಾಗುವುದು: ಡಿಸಿ ಬಿ.ಶರತ್​ - Curfew in Kalaburagi

ನಿಷೇಧಾಜ್ಞೆ ಜಾರಿಗೊಳಿಸಿದರೂ ಕೆಲ ಯುವಕರು ನಿಷೇಧಾಜ್ಞೆಯ ತೀವ್ರತೆ ಅರಿಯದೆ ರಸ್ತೆ‌ ಮೇಲೆ ಓಡಾಡುತ್ತಿರುವುದು ಗಮನಕ್ಕೆ ಬಂದಿದೆ. ಅಂತಹವರನ್ನು ವಶಕ್ಕೆ ಪಡೆದು ಕೊರೊನಾ ವಿರುದ್ಧದ ಹೋರಾಟದಲ್ಲಿ ಸ್ವಯಂ ಸೇವಕರನ್ನಾಗಿ ಬಳಸಿಕೊಳ್ಳಲಾಗುವುದು ಎಂದು ಕಲಬುರಗಿ ಜಿಲ್ಲಾಧಿಕಾರಿ ಶರತ್ ಬಿ. ಎಚ್ಚರಿಸಿದ್ದಾರೆ.

Violators who roam around without knowing the severity of the ban will punished: DC b. Sharath
ನಿಷೇಧಾಜ್ಞೆಯ ತೀವ್ರತೆ ಅರಿಯದೇ ಉಲ್ಲಘಿಸಿದವರನ್ನು ವಶಕ್ಕೆ ಪಡೆಯಲಾಗುವುದು: ಡಿಸಿ ಬಿ. ಶರತ್​

By

Published : Mar 22, 2020, 8:07 AM IST

ಕಲಬುರಗಿ:ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಕಲಬುರಗಿ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಆದ್ರೂ ಕೆಲ ಯುವಕರು ನಿಷೇಧಾಜ್ಞೆಯ ತೀವ್ರತೆ ಅರಿಯದೆ ರಸ್ತೆ‌ ಮೇಲೆ ಓಡಾಡುತ್ತಿದ್ದಾರೆ. ಇಂಥವರನ್ನು ವಶಕ್ಕೆ ಪಡೆದು ಕೊರೊನಾ ವಿರುದ್ಧದ ಹೋರಾಟದಲ್ಲಿ ಸ್ವಯಂಸೇವಕರನ್ನಾಗಿ ಬಳಸಿಕೊಳ್ಳಲಾಗುವುದು ಎಂದು ಕಲಬುರಗಿ ಜಿಲ್ಲಾಧಿಕಾರಿ ಶರತ್ ಬಿ. ಎಚ್ಚರಿಸಿದ್ದಾರೆ.

ನಿಷೇಧಾಜ್ಞೆಯ ಉಲ್ಲಂಘಿಸಿದವರನ್ನು ಸ್ವಯಂ ಸೇವಕರನ್ನಾಗಿ ಬಳಸಿಕೊಳ್ಳಲಾಗುವುದು: ಡಿಸಿ ಬಿ. ಶರತ್​

ಮಾರ್ಚ್ 19ರ ರಾತ್ರಿ 8 ಗಂಟೆಯಿಂದಲೇ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದು, ಮಾರ್ಚ್ 22ರ ವರೆಗೆ ಮುಂದುವರೆಯಲಿದೆ. ಸಾರ್ವಜನಿಕರು ಈ ಸಂದರ್ಭದಲ್ಲಿ ಅಗತ್ಯ ವಸ್ತುಗಳನ್ನು ಪಡೆಯಲು ಹೊರತುಪಡಿಸಿ ಅನಾವಶ್ಯಕವಾಗಿ ಮನೆಯಿಂದ ಹೊರಬರಬಾರದು. ಈ ಮೂಲಕ ಜಿಲ್ಲಾಡಳಿತಕ್ಕೆ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಹೊರ ದೇಶದಿಂದ ಬಂದವರು ಸ್ವಯಂ‌ಪ್ರೇರಿತರಾಗಿ ತಪಾಸಣೆ ಮಾಡಿಸಿ. ಕೊವಿಡ್-19 ಕೊರೊನಾ ವೈರಾಣುವಿನಿಂದ ರಾಜ್ಯದಲ್ಲೇ ಕಲಬುರಗಿಯಲ್ಲಿ ‌ಮೊದಲು ಸಾವು ಸಂಭವಿಸಿದೆ. ಸದ್ಯ ಇನ್ನೂ ಇಬ್ಬರಿಗೆ ಸೋಂಕು ಬಾಧಿಸಿರುವುದು ದೃಢಪಟ್ಟಿದೆ. ಸೋಂಕಿತ ವ್ಯಕ್ತಿಯ ಜೊತೆ ನೇರ ಸಂಪರ್ಕ ಹೊಂದಿದವರನ್ನು ಸಂಪರ್ಕಿಸಿ ತಪಾಸಣೆಗೆ ಸಹಕರಿಸುವಂತೆ ತಿಳಿಸಿ ಎಂದು ಸಾರ್ವಜನಿಕರಿಗೆ ತಿಳಿಸಿದ್ದಾರೆ.

ಇತ್ತೀಚೆಗೆ ಹೊರದೇಶಗಳಿಂದ ಬಂದಂತವರು ಸ್ವಯಂಪ್ರೇರಿತರಾಗಿ ಸಹಾಯವಾಣಿ 08472- 278677 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಿ ಎಂದು ಸೂಚನೆ ನೀಡಿದ್ದಾರೆ.

ABOUT THE AUTHOR

...view details