ಕರ್ನಾಟಕ

karnataka

ETV Bharat / state

ಮರೆಯಾದ ಸಾಮಾಜಿಕ ಅಂತರ: ಪಾಲಿಕೆಯಲ್ಲಿಯೇ ಕೋವಿಡ್​ ನಿಯಮ ಉಲ್ಲಂಘನೆ ಆರೋಪ

ಕೋವಿಡ್ 2ನೇ ಅಲೇ ಅಬ್ಬರಿಸುತ್ತಿರುವುದರಿಂದ ಜನದಟ್ಟಣೆ ತಪ್ಪಿಸಲು ಪಾಲಿಕೆ ಹೆಚ್ಚೆಚ್ಚು ಕೌಂಟರ್ ತೆರೆದು ಜನ ಸಾಮಾನ್ಯರಿಗೆ ಅನುಕೂಲ ಮಾಡಿಕೊಡುವುದರೊಂದಿಗೆ ಕೋವಿಡ್ ಮುನ್ನೆಚ್ಚರಿಕಾ ಕ್ರಮಕ್ಕೆ ಪಾಲಿಕೆ ಆಯುಕ್ತರು ಮುಂದಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

kalburgi
ಪಾಲಿಕೆಯಲ್ಲಿಯೇ ಕೋವಿಡ್​ ನಿಯಮ ಉಲ್ಲಂಘನೆ ಆರೋಪ

By

Published : Apr 18, 2021, 10:36 AM IST

ಕಲಬುರಗಿ:ದೀಪದ ಕೆಳಗೆ ಕತ್ತಲು ಅನ್ನೋ ಹಾಗೆ ಮಾಸ್ಕ್ ಹಾಕದವರನ್ನು ಹುಡುಕಿ ಹುಡುಕಿ ದಂಡ ಹಾಕುವ ಮಹಾನಗರ ಪಾಲಿಕೆಯ ಕಚೇರಿಯಲ್ಲಿಯೇ ಮಾಸ್ಕ್​ ಧರಿಸದೆ, ಸಾಮಾಜಿಕ ಅಂತರ ಇಲ್ಲದೆ ಸರದಿ ಸಾಲಿನಲ್ಲಿ ಜನರು ನಿಂತು ಪಡಬಾರದ ಕಷ್ಟ ಪಡುತ್ತಾ ಇದ್ದರೆ, ಪರ್ಯಾಯ ಮಾರ್ಗ ಕಂಡುಕೊಂಡು ಜನದಟ್ಟಣೆ ತಪ್ಪಿಸುವಲ್ಲಿ ಪಾಲಿಕೆ ಸಂಪೂರ್ಣ ವಿಫಲವಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.

ಪಾಲಿಕೆಯಲ್ಲಿಯೇ ಕೋವಿಡ್​ ನಿಯಮ ಉಲ್ಲಂಘನೆ ಆರೋಪ

ಏಪ್ರಿಲ್​ ತಿಂಗಳಾದ್ದರಿಂದ ಅಸ್ತಿಯ ತೆರಿಗೆ ಕಟ್ಟಲು, ಅಂಗಡಿಗಳ ಪರವಾನಿಗೆ ನವೀಕರಣ ಸೇರಿದಂತೆ ಅನೇಕ ಕೆಲಸದ ನಿಮಿತ್ತ ಮಹಾನಗರ ಪಾಲಿಕೆಗೆ ಸಮರೋಪಾದಿಯಲ್ಲಿ ಸಾರ್ವಜನಿಕರು ಹರಿದು ಬರುತ್ತಿದ್ದಾರೆ. ಸಾಲದದ್ದ ಸಾಮಾಜಿಕ ಅಂತರ ಇಲ್ಲದೆ ನೂಕು ನುಗ್ಗಲಿನಲ್ಲಿ ನಿಂತು ಕೆಲಸ ಮುಗಿಸಿಕೊಂಡು ಹೋಗಲು ಪರದಾಡುತ್ತಿದ್ದಾರೆ.

ಕೋವಿಡ್ ಮುಂಜಾಗ್ರತ ಕ್ರಮವಾಗಿ ಸಾಮಾಜಿಕ ಅಂತರ ಅಗತ್ಯ, ಮಾಸ್ಕ್​ ಕಡ್ಡಾಯವಾಗಿ ಧರಿಸಬೇಕು ಎನ್ನುತ್ತಲೇ ಜನರಿಗೆ ದಂಡ ಹಾಕಿದ ಮಹಾನಗರ ಪಾಲಿಕೆ ತನ್ನ ಕಚೇರಿಯಲ್ಲಿಯೇ ಜನ ದಟ್ಟಣೆ ಆಗುತ್ತಿದ್ದರೂ ಅದನ್ನು ತಪ್ಪಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿರುವ ಪಾಲಿಕೆ, ತನ್ನ ಕಚೇರಿಯಲ್ಲಿಯೇ ಆಗುವ ಅವಘಡ ತಪ್ಪಿಸಲು ಮುಂದಾಗುತ್ತಿಲ್ಲ ಎಂದು ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಏಪ್ರಿಲ್ ತಿಂಗಳಾದ್ದರಿಂದ ಪಾಲಿಕೆಗೆ ಹಲವು ಕೆಲಸ ಹೊತ್ತು ಜನ ಬರುವದು ಸಾಮಾನ್ಯ. ಇನ್ನೊಂದೆಡೆ ಬಿಸಿಲಿನ ಕಾರಣಕ್ಕೆ ಸರ್ಕಾರಿ ಕಚೇರಿಗಳು ಬೆಳಗ್ಗೆ 8 ರಿಂದ 1ಗಂಟೆವರೆಗೆ ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಹೀಗಾಗಿ ಜನದಟ್ಟಣೆಯಾಗುತ್ತದೆ. ಕೋವಿಡ್ 2ನೇ ಅಲೇ ಅಬ್ಬರಿಸುತ್ತಿರುವುದರಿಂದ ಜನದಟ್ಟಣೆ ತಪ್ಪಿಸಲು ಪಾಲಿಕೆ ಹೆಚ್ಚೆಚ್ಚು ಕೌಂಟರ್ ತೆರೆದು ಜನ ಸಾಮಾನ್ಯರಿಗೆ ಅನುಕೂಲ ಮಾಡಿಕೊಡುವುದರೊಂದಿಗೆ ಕೋವಿಡ್ ಮುನ್ನೆಚ್ಚರಿಕಾ ಕ್ರಮಕ್ಕೆ ಪಾಲಿಕೆ ಆಯುಕ್ತರು ಮುಂದಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ABOUT THE AUTHOR

...view details