ಕರ್ನಾಟಕ

karnataka

ETV Bharat / state

ಕಲಬುರಗಿಯಲ್ಲಿ ಭಾರೀ ಮಳೆ : 200 ಮಕ್ಕಳು ಶಾಲಾ ಸಿಬ್ಬಂದಿ ರಕ್ಷಿಸಿದ ಗ್ರಾಮಸ್ಥರು - ಈಟಿವಿ ಭಾರತ ಕನ್ನಡ

ಕಲಬುರಗಿಯಲ್ಲಿ ಭಾರೀ ಮಳೆಯಾಗುತ್ತಿದ್ದು, 200 ಮಕ್ಕಳು ಹಾಗೂ ಶಾಲಾ ಸಿಬ್ಬಂದಿಯನ್ನು ಗ್ರಾಮಸ್ಥರು ರಕ್ಷಣೆ ಮಾಡಿದ್ದಾರೆ.

ಕಲಬುರಗಿಯಲ್ಲಿ ಭಾರೀ ಮಳೆ
ಕಲಬುರಗಿಯಲ್ಲಿ ಭಾರೀ ಮಳೆ

By

Published : Aug 3, 2022, 7:13 PM IST

Updated : Aug 3, 2022, 7:23 PM IST

ಕಲಬುರಗಿ: ಜಿಲ್ಲೆಯಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಹಲವು ಅವಾಂತರಗಳು‌ ಮುಂದುವರೆದಿವೆ. ಮಳೆಯಿಂದ ತುಂಬಿ ಹರಿಯುತ್ತಿದ್ದ ಹಳ್ಳದ ನೀರಿನ ದಡದಲ್ಲಿ ಸಿಲುಕಿದ್ದ ಶಾಲಾ ಮಕ್ಕಳು, ಸಿಬ್ಬಂದಿಯನ್ನು ಗ್ರಾಮಸ್ಥರು ರಕ್ಷಣೆ ಮಾಡಿದ್ದಾರೆ. ಕಲಬುರಗಿ ತಾಲೂಕಿನ ಅಷ್ಟಗಿ ಗ್ರಾಮದಲ್ಲಿ ಈ ಘಟನೆ ಜರುಗಿದೆ.

ಅಷ್ಟಗಿ ಹೊರಭಾಗದಲ್ಲಿ ಸರ್ಕಾರಿ ಶಾಲೆ ಇದ್ದು, ಈ ಶಾಲೆ ಮತ್ತು ಗ್ರಾಮದ ನಡುವೆ ಹಳ್ಳ ಇದೆ. ಬೆಳಗ್ಗೆ ಮಕ್ಕಳು ಶಾಲೆಗೆ ತೆರಳಿದ ಮೇಲೆ ವರುಣ ಅಬ್ಬರಿಸಿದ ಪರಿಣಾಮ ಹಳ್ಳ ತುಂಬಿ ರಸ್ತೆ ಮೇಲೆ ರಬಸವಾಗಿ ನೀರು ಹರಿದಿದೆ. ಶಾಲೆಗೂ ಮಳೆ ನೀರು ನುಗ್ಗಿದೆ. ಪರಿಣಾಮ ಮಕ್ಕಳು ಗ್ರಾಮಕ್ಕೆ ಬರಲಾಗದೆ ಶಾಲೆಯಲ್ಲಿ ಕುಳಿತುಕೊಳ್ಳಲೂ ಆಗದೆ ಹಳ್ಳದ ದಡದಲ್ಲಿ ಸುಮಾರು ಹೊತ್ತು ಕಳೆದಿದ್ದಾರೆ.

ಕಲಬುರಗಿಯಲ್ಲಿ ಭಾರೀ ಮಳೆ : 200 ಮಕ್ಕಳು ಶಾಲಾ ಸಿಬ್ಬಂದಿ ರಕ್ಷಿಸಿದ ಗ್ರಾಮಸ್ಥರು

ನೀರಿನ ರಭಸ ಕೊಂಚ ಕಡಿಮೆ ಆದ ಮೇಲೆ ಗ್ರಾಮಸ್ಥರು ಒಟ್ಟಾಗಿ ಶಾಲೆಯ ಮಕ್ಕಳನ್ನ ರಕ್ಷಣೆ ಮಾಡಿದ್ದಾರೆ. ಈ ವೇಳೆ ಗರ್ಭಿಣಿ ಶಿಕ್ಷಕಿ ಸೇರಿ 8 ಜನ ಶಾಲಾ ಸಿಬ್ಬಂದಿಯನ್ನು ಗ್ರಾಮಸ್ಥರು ರಕ್ಷಣೆ ಮಾಡಿದ್ದಾರೆ. ಹಳ್ಳದ ದಡದಲ್ಲಿ ಶಾಲೆ ಇದ್ದರೂ ಸೇತುವೆ ನಿರ್ಮಾಣ ಕಾರ್ಯ ನಡೆದಿಲ್ಲ. 1 ರಿಂದ 8 ನೇ ತರಗತಿವರೆಗೆ ಸುಮಾರು 200 ಮಕ್ಕಳು ಶಾಲೆಗೆ ತೆರಳುತ್ತಾರೆ. ಇವರಿಗೆ ಏನಾದರೂ ತೊಂದರೆ ಆದರೆ ಯಾರು ಹೊಣೆ ಎಂದು ಪೋಷಕರು ಪ್ರಶ್ನಿಸಿದ್ದಾರೆ.

ಮನೆ- ಅಂಗಡಿಗಳಿಗೂ ನುಗ್ಗಿದ ನೀರು:ಅಫಜಲಪೂರ ತಾಲೂಕಿನಲ್ಲಿ ಸುರಿಯುತ್ತಿರುವ ಎ.ಕೆ. ಟೈಯರ್ ಶೋರೂಮ್​ ಮಳೆ ನೀರು ನುಗ್ಗಿ ಸಾಕಷ್ಟು ಹಾನಿ ಸಂಭವಿಸಿದೆ. ಇದೇ ತಾಲೂಕಿನ ಸೋಮನಾಥ ಹಳ್ಳಿಯ ಹಲವು ಮನೆಗಳಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಗ್ರಾಮದಲ್ಲಿ ಹಳ್ಳದಂತೆ ಹರಿಯುತ್ತಿರುವ ಮಳೆ ನೀರು ಸಿಕ್ಕಸಿಕ್ಕ ಮನೆಗಳಿಗೆ ನುಗ್ಗಿ ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ.

ಇದನ್ನೂ ಓದಿ: ಮಳೆ ಅಬ್ಬರಕ್ಕೆ ಮತ್ತೆ ನಲುಗಿದ ಬೆಂಗಳೂರಿನ ಸಾಯಿ‌ ಬಡಾವಣೆ: ಸಚಿವ ಬೈರತಿ ಬಸವರಾಜ್ ಪರಿಶೀಲನೆ

Last Updated : Aug 3, 2022, 7:23 PM IST

ABOUT THE AUTHOR

...view details