ಕಲಬುರಗಿ: ಮಕ್ಕಳ ಕಳ್ಳರು ಬಂದಿದ್ದಾರೆಂಬ ವದಂತಿ ಹಿನ್ನೆಲೆ ಟವೇರಾ ವಾಹನದಲ್ಲಿ ಬಂದಿದ್ದ ಮೂವರನ್ನು ಹಿಡಿದು ಪೊಲೀಸ್ ಠಾಣೆಗೆ ಒಪ್ಪಿಸಿದ ಘಟನೆ ನಗರದ ರಾಜಾಪೂರ ಬಡಾವಣೆಯಲ್ಲಿ ನಡೆದಿದೆ.
ಕಲಬುರಗಿಯಲ್ಲಿ ಮಕ್ಕಳ ಕಳ್ಳರ ವದಂತಿ: ಮೂವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು - ಪೊಲೀಸ್ ಠಾಣೆ
ಮತ್ತೆ ಮಕ್ಕಳ ಕಳ್ಳರ ವದಂತಿ ಹಬ್ಬಿದೆ. ಅಂತೆಯೇ ಅನುಮಾನಾಸ್ಪದವಾಗಿ ಒಡಾಡುತ್ತಿದ್ದ ಮೂವರನ್ನು ಸ್ಥಳೀಯರು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ. ನಗರದ ರಾಜಾಪೂರ ಬಡಾವಣೆಯಲ್ಲಿ ಈ ಘಟನೆ ನಡೆದಿದೆ.
ಟವೇರಾ ವಾಹನದಲ್ಲಿ ಬಂದಿದ್ದ ಐವರು ಅನುಮಾನಾಸ್ಪದವಾಗಿ ಓಡಾಡುವುದನ್ನು ಗಮನಿಸಿದ ಸ್ಥಳೀಯರು ಅವರನ್ನು ಹಿಡಿದಿದ್ದಾರೆ. ಬಳಿಕ ಟವೇರಾ ವಾಹನದಲ್ಲಿ ನೋಡಿದಾಗ ಮಕ್ಕಳ ಬಟ್ಟೆ ಹಾಗೂ ಮಪ್ಲರ್ ಸೇರಿದಂತೆ ಇನ್ನಿತರ ಸಾಮಾನುಗಳು ಕಂಡುಬಂದಿವೆ. ಹೀಗಾಗಿ ತಕ್ಷಣ ಪೊಲೀಸರನ್ನು ಕರೆಸಿ ಅವರನ್ನು ಒಪ್ಪಿಸಿದ್ದಾರೆ.
ಈ ವೇಳೆ ಇಬ್ಬರು ತಪ್ಪಿಸಿಕೊಂಡು ಓಡಿ ಹೋಗಿದ್ದಾರೆ. ಸ್ಥಳಕ್ಕೆ ಗುಲಬರ್ಗಾ ವಿವಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಅನುಮಾನಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ತನಿಖೆ ನಂತರವಷ್ಟೇ ಇವರು ನಿಜವಾದ ಕಳ್ಳರು ಹೌದು, ಅಲ್ಲಾ ಅನ್ನೋದು ತಿಳಿದುಬರಲಿದೆ. ಆದ್ರೆ ಮಕ್ಕಳ ಕಳ್ಳರು ಎಂಬ ವದಂತಿ ಹಿನ್ನೆಲೆ ನಗರದ ಜನತೆ ಬೆಚ್ಚಿ ಬಿದ್ದಿದ್ದಾರೆ.