ಕ್ರಿಕೆಟ್ ಬೆಟ್ಟಿಂಗ್ ಆರೋಪ ಪ್ರಕರಣ.. ಶಾಸಕ ಬಸವರಾಜ್ ಮತ್ತಿಮೂಡ ರಾಜೀನಾಮೆಗೆ ಆಗ್ರಹ - ಬಿಜೆಪಿ ಶಾಸಕ ಬಸವರಾಜ್ ಮತ್ತಿಮೂಡ್ ರಾಜೀನಾಮೆಗೆ ಕಾಂಗ್ರೆಸ್ ಆಗ್ರಹ
ಅಲ್ಲದೆ ಈ ಹಿಂದೆ ಸಹ ಹಲವು ಬಾರಿ ಬೆಟ್ಟಿಂಗ್ ಪ್ರಕರಣದಲ್ಲಿ ಮತ್ತಿಮೂಡ್ ಅವರ ಹೆಸರು ಕೇಳಿ ಬಂದಿದೆ. ಯುವಜನತೆಗೆ ಮಾದರಿಯಾಗಬೇಕಾದ ಶಾಸಕರೆ ಈ ರೀತಿ ಬೆಟ್ಟಿಂಗ್ ಪ್ರಕರಣದಲ್ಲಿ ಸಿಲುಕಿಕೊಂಡರೆ ಭವಿಷ್ಯದ ಯುವಕರ ಗತಿಯೇನು ಎಂದು ಅವರು ಪ್ರಶ್ನಿಸಿದ್ದಾರೆ..

ಶಾಸಕ ಬಸವರಾಜ್ ಮತ್ತಿಮೂಡ ರಾಜೀನಾಮೆಗೆ ಆಗ್ರಹ
ಕಲಬುರಗಿ: ಕ್ರಿಕೆಟ್ ಬೆಟ್ಟಿಂಗ್ ಪ್ರಕರಣದ ಆರೋಪ ಎದುರಿಸುತ್ತಿರುವ ಕಲಬುರಗಿ ಗ್ರಾಮೀಣ ಮತ ಕ್ಷೇತ್ರದ ಶಾಸಕ ಬಸವರಾಜ್ ಮತ್ತಿಮೂಡ ಅವರು ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ಯುವ ಮುಖಂಡ ವಿಜಯಕುಮಾರ್ ರಾಮಕೃಷ್ಣ ಆಗ್ರಹಿಸಿದ್ದಾರೆ.
ಶಾಸಕ ಬಸವರಾಜ್ ಮತ್ತಿಮೂಡ ರಾಜೀನಾಮೆಗೆ ಆಗ್ರಹ
ಅಲ್ಲದೆ ಈ ಹಿಂದೆ ಸಹ ಹಲವು ಬಾರಿ ಬೆಟ್ಟಿಂಗ್ ಪ್ರಕರಣದಲ್ಲಿ ಮತ್ತಿಮೂಡ್ ಅವರ ಹೆಸರು ಕೇಳಿ ಬಂದಿದೆ. ಯುವಜನತೆಗೆ ಮಾದರಿಯಾಗಬೇಕಾದ ಶಾಸಕರೆ ಈ ರೀತಿ ಬೆಟ್ಟಿಂಗ್ ಪ್ರಕರಣದಲ್ಲಿ ಸಿಲುಕಿಕೊಂಡರೆ ಭವಿಷ್ಯದ ಯುವಕರ ಗತಿಯೇನು ಎಂದು ಅವರು ಪ್ರಶ್ನಿಸಿದ್ದಾರೆ.
ಕೂಡಲೆ ಪ್ರಕರಣವನ್ನು ಸಂಪೂರ್ಣ ತನಿಖೆ ನಡೆಸಿ, ಬೆಟ್ಟಿಂಗ್ ದಂಧೆಯಲ್ಲಿದ್ದವರನ್ನ ಪತ್ತೆ ಹಚ್ಚುವುದರ ಜೊತೆಗೆ ಗ್ರಾಮೀಣ ಶಾಸಕ ಬಸವರಾಜ್ ಮತ್ತಿಮೂಡ್ ಅವರನ್ನು ಸಿಎಂ ಯಡಿಯೂರಪ್ಪನವರು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಆಗ್ರಹಿಸಿದರು.