ಕಲಬುರಗಿ:ಪೇ ಸಿಎಂ ನಿಂದ ಕಾಂಗ್ರೆಸ್‌ಗೆ ದೊಡ್ಡ ಪ್ರಚಾರ ಸಿಕ್ಕಿದೆ ಅಂತಾ ತಿಳಿದುಕೊಂಡಿದ್ದಾರೆ. ಆದರೆ ಪೇ ಸಿಎಂ ಕಾಂಗ್ರೆಸ್ ಪಕ್ಷಕ್ಕೆ ತಿರುಗು ಬಾಣವಾಗಲಿದೆ ಎಂದು ಕಲಬುರಗಿಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ.
ಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪೇ ಸಿಎಂ ಅಪಪ್ರಚಾರಕ್ಕೆ ಜನ ಉತ್ತರಸಲಿದ್ದಾರೆ. ಕೇರಳ ರಾಜ್ಯದ ದೇಶದ್ರೋಹಿ ಫಾದರ್ ಜಾರ್ಜ್ ಜೊತೆ ಕೈ ನಾಯಕರು ಭಾರತ್ ಜೋಡೋ ಯಾತ್ರೆ ಮಾಡುತ್ತಿದ್ದಾರೆ. ಅವರೊಟ್ಟಿಗೆ ಕುಳಿತು ಸಭೆ ಮಾಡ್ತಿದಾರೆ. ಕಾಂಗ್ರೆಸ್ ಪಕ್ಷ ಇರೋ ಅಸ್ತಿತ್ವ ಕಳೆದುಕೊಳ್ಳಲು ಭಾರತ್ ಜೋಡೋ ಯಾತ್ರೆ ಮಾಡುತ್ತಿದೆ. ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯ ನೋಡಿ ಕಾಂಗ್ರೆಸ್ ಪಕ್ಷ ವಿಚಲಿತರಾಗಿದ್ದಾರೆ. ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.
ಇನ್ನು ಚಾಮರಾಜನಗರದಲ್ಲಿ ಭಾರತ್ ಜೋಡೋ ಯಾತ್ರೆ ಫ್ಲೇಕ್ಸ್ ಹರಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಅಂತಹ ಚಿಪ್ ಕೆಲಸ ಬಿಜೆಪಿ ಎಂದು ಮಾಡುವುದಿಲ್ಲ, ಇಂತಹ ಅಗತ್ಯ ನಮಗಿಲ್ಲ, ಅವರದ್ದೇ ಪಕ್ಷದವರು ಪ್ಲೆಕ್ಸ್ ಹರಿದು ಹಾಕಿ ನಮ್ಮೆಲೆ ಹಾಕುತ್ತಿದ್ದಾರೆ ಎಂದು ಡಿಕೆಶಿ ಆರೋಪಕ್ಕೆ ತಿರುಗೇಟು ನೀಡಿದರು.
ಬಳಿಕ ಪಿಎಫ್ಐ ಬ್ಯಾನ್ ವಿಚಾರವಾಗಿ ಮಾತನಾಡಿ, ಕೇಂದ್ರ ಸರ್ಕಾರ ನವರಾತ್ರಿಯ ಶುಭಸಂದರ್ಭದಲ್ಲಿ ಅತ್ಯುತ್ತಮ ನಿರ್ಧಾರ ಕೈಗೊಂಡಿದೆ. ಕಳೆದ ಹಲವಾರು ವರ್ಷಗಳಿಂದ PFI ರಾಷ್ಟ್ರವಿರೋಧಿ ಚಟುವಟಿಕೆ ನಡೆಸಿಕೊಂಡು ಬಂದಿದೆ. ರಾಜ್ಯ, ದೇಶದಲ್ಲಿ ಕೋಮು ಸೌಹಾರ್ದ ಕದಡುವ ಕೆಲಸ ಪಿಎಫ್‌ಐ ಮಾಡಿದೆ. ಒಂದು ಧರ್ಮದ ಯುವಕರನ್ನ ಅಡ್ಡದಾರಿಗೆ ತೆಗೆದುಕೊಂಡು ಹೋಗುವ ಕೆಲಸ ಆಗತಿತ್ತು.