ಕರ್ನಾಟಕ

karnataka

ETV Bharat / state

ಕಲಬುರಗಿಯಲ್ಲಿ ಉಲ್ಬಣವಾಗಿದೆ ವೆಂಟಿಲೇಟರ್​ ಸಮಸ್ಯೆ!? - ಕಲಬುರಗಿ ವೆಂಟಿಲೇಟರ್​ ಸಮಸ್ಯೆ,

ಕಲಬರುಗಿಯಲ್ಲಿ ಕೊರೊನಾ ರೋಗಿಗಳಿಗೆ ವೆಂಟಿಲೇಟರ್​ ಕೊರತೆ ಉಲ್ಬಣವಾಗಿದೆ ಎಂಬ ಆರೋಪ ಕೇಳಿಬಂದಿದೆ.

Ventilator problem, Ventilator problem in Kalaburagi, Kalaburagi Ventilator problem, Kalaburagi Ventilator problem news, ವೆಂಟಿಲೇಟರ್​ ಸಮಸ್ಯೆ, ಕಲಬುರಗಿಯಲ್ಲಿ ವೆಂಟಿಲೇಟರ್​ ಸಮಸ್ಯೆ, ಕಲಬುರಗಿ ವೆಂಟಿಲೇಟರ್​ ಸಮಸ್ಯೆ, ಕಲಬುರಗಿ ವೆಂಟಿಲೇಟರ್​ ಸಮಸ್ಯೆ ಸುದ್ದಿ,
ವೆಂಟಿಲೇಟರ್​ ಸಮಸ್ಯೆ

By

Published : Jul 23, 2020, 6:43 AM IST

ಕಲಬುರಗಿ:ಜಿಲ್ಲೆಯಲ್ಲಿ ವೆಂಟಿಲೇಟರ್ ಕೊರತೆ ಇಲ್ಲ ಎಂದು ಜಿಲ್ಲಾಡಳಿತ ಹೇಳ್ತಿದೆ. ಆದರೆ, ಕಳೆದೆರಡು ದಿನಗಳಿಂದ ಮೃತಪಟ್ಟವರಲ್ಲಿ ಬಹುತೇಕರು ಆಕ್ಸಿಜನ್ ಕೊರತೆಯಿಂದ ಬಳಲುತ್ತಿದ್ದವರೇ ಜಾಸ್ತಿ ಎಂಬ ಆರೋಪ ದಟ್ಟವಾಗಿ ಕೇಳಿಬರುತ್ತಿದೆ.

ಕೊರೊನಾ ವಾರಿಯರ್ ಆಶಾ ಕಾರ್ಯಕರ್ತೆ ಅಕ್ಕನಾಗಮ್ಮ ಅವರಿಗೆ ಸಕಾಲಕ್ಕೆ ವೆಂಟಿಲೇಟರ್ ವ್ಯವಸ್ಥೆ ಸಿಗದಿದ್ದಕ್ಕೆ ಮೃತಪಟ್ಟಿದ್ದಾರೆ ಎಂಬ ಆರೋಪದ ನಡುವೆ ನಿನ್ನೆ ಮತ್ತೊರ್ವ ಶಿಕ್ಷಕರೂ ಇಂತಹುದೇ ಸಮಸ್ಯೆಯಿಂದಾಗಿ ಮೃತಪಟ್ಟಿದ್ದಾರೆ ಎಂಬ ಆರೋಪವನ್ನ ಕುಟುಂಬಸ್ಥರು ಮಾಡಿದ್ದಾರೆ.

ಕಲಬುರಗಿ ಇಎಸ್ಐ ಆಸ್ಪತ್ರೆಯಲ್ಲಿ ನಿನ್ನೆ ಅಫಜಲಪುರ ಪಟ್ಟಣದ ಶಿಕ್ಷಕ ಬಸವರಾಜ ಪದಕಿ ಎಂಬುವರು ಮೃತಪಟ್ಟಿದ್ದಾರೆ. ಇವರ ಸಾವಿಗೆ ವೆಂಟಿಲೇಟರ್ ಕೊರತೆ ಕಾರಣ ಎಂದು ಕುಟುಂಬಸ್ಥರು ಕಿಡಿಕಾರಿದ್ದಾರೆ. ನಂತರ ಇವರ ಗಂಟಲು ದ್ರವ ಕೋವಿಡ್ ಪರೀಕ್ಷೆಗೆ ಕಳುಹಿಸಲಾಗಿದೆ.

ಇದಲ್ಲದೇ ನಿನ್ನೆ ಜಿಮ್ಸ್ ಆಸ್ಪತ್ರೆಯಲ್ಲಿ ನಿಧನರಾದ ವೃದ್ಧೆಯ ಸಾವಿಗೂ ವೆಂಟಿಲೇಟರ್​ ಕೊರತೆಯೇ ಕಾರಣ ಎಂದು ಮಗ ದೂರಿದ್ದಾರೆ. ಅಲ್ಲದೇ ಚಿತ್ತಾಪೂರ ಶಾಸಕ ಪ್ರಿಯಾಂಕ್ ಖರ್ಗೆ ಕೂಡಾ ಈ ಬಗ್ಗೆ ಟ್ವೀಟ್​ ಮಾಡಿ ಜಿಲ್ಲಾಡಳಿತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ‌.

ಒಟ್ಟಾರೆ ಜಿಲ್ಲಾಡಳಿತ ಆಕ್ಸಿಜನ್ ಅಥವಾ ವೆಂಟಿಲೇಟರ್ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸುತ್ತಿದೆ. ಆದರೆ, ಮೃತರ ಸಂಬಂಧಿಕರು ಮಾತ್ರ ಆಕ್ಸಿಜನ್, ವೆಂಟಿಲೇಟರ್ ಕೊರತೆಯಿಂದಲೇ ತಮ್ಮವರನ್ನು ಕಳೆದುಕೊಂಡಿರುವುದಾಗಿ ಹೇಳ್ತಿದ್ದಾರೆ. ಈ ಬಗ್ಗೆ ಸರ್ಕಾರ ಗಮನಹರಿಸಿ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಅನ್ನೋದು ಜಿಲ್ಲೆಯ ಜನರ ಆಗ್ರಹವಾಗಿದೆ.

ABOUT THE AUTHOR

...view details