ಕಲಬುರಗಿ: ಈಚೆಗೆ ಎಜ್ಯುಕೇಷನ್ ಟೂಡೆ ಡಾಟ್ ಕಾಂ ಸಹ ಪಠ್ಯ ಚುಟುವಟಿಕೆಯಲ್ಲಿ ಉತ್ತಮ ಸಾಧನೆಗೈದ ಶಾಲೆಗಳಿಗೆ ನೀಡುವ ಇಂಡಿಯಾ ಸ್ಕೂಲ್ ಮೆರಿಟ್ ಪ್ರಶಸ್ತಿ ಇಲ್ಲಿನ ಬಸವಣ್ಣಪ್ಪ ಎಜ್ಯುಕೇಷನಲ್ ಮತ್ತು ಚಾರಿಟೇಬಲ್ ಟ್ರಸ್ಟ್ನ ವೇದಾ ಪಬ್ಲಿಕ್ ಶಾಲೆಗೆ ಲಭಿಸಿದೆ.
ಕಲಬುರಗಿಯ ವೇದಾ ಪಬ್ಲಿಕ್ ಶಾಲೆಗೆ ಇಂಡಿಯಾ ಸ್ಕೂಲ್ ಮೆರಿಟ್ ಪ್ರಶಸ್ತಿ - ಇಂಡಿಯಾ ಸ್ಕೂಲ್ ಮೆರಿಟ್ ಪ್ರಶಸ್ತಿ ಪಡೆದ ಶಾಲೆ
ಕಲಬುರಗಿಯ ವೇದಾ ಪಬ್ಲಿಕ್ ಶಾಲೆಗೆ ಇಂಡಿಯಾ ಸ್ಕೂಲ್ ಮೆರಿಟ್ ಪ್ರಶಸ್ತಿ ಲಭಿಸಿದೆ. 10 ಮಾನದಂಡಗಳ ಆಧಾರದ ಮೇಲೆ ವೇದಾ ಶಾಲೆಯನ್ನು ಆಯ್ಕೆ ಮಾಡಲಾಗಿದೆ.
![ಕಲಬುರಗಿಯ ವೇದಾ ಪಬ್ಲಿಕ್ ಶಾಲೆಗೆ ಇಂಡಿಯಾ ಸ್ಕೂಲ್ ಮೆರಿಟ್ ಪ್ರಶಸ್ತಿ Veda Public School won the India School Merit Award](https://etvbharatimages.akamaized.net/etvbharat/prod-images/768-512-5445172-thumbnail-3x2-klb.jpg)
ವೇದಾ ಪಬ್ಲಿಕ್ ಶಾಲೆಗೆ ಇಂಡಿಯಾ ಸ್ಕೂಲ್ ಮೆರಿಟ್ ಪ್ರಶಸ್ತಿ
ವೇದಾ ಪಬ್ಲಿಕ್ ಶಾಲೆ ಟೂಡೆ ಡಾಟ್ ಕಾಂ ರಾಷ್ಟ್ರದಾದ್ಯಂತ ನಡೆಸಿದ ಸಮೀಕ್ಷೆಯಲ್ಲಿ ವೇದಾ ಪಬ್ಲಿಕ್ ಶಾಲೆ ಪ್ರಥಮ ಸ್ಥಾನ ಪಡೆಯುವ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದಿದೆ. ಮೂಲಭೂತ ಸೌಕರ್ಯ, ವಿನೂತನ ಬೋಧನೆ, ಭದ್ರತೆ ಮತ್ತು ಆರೋಗ್ಯ, ಆಟೋಟಗಳು, ಹಣದ ಮೌಲ್ಯ, ಪರಿಶುದ್ಧತೆ ಅಭಿವೃದ್ಧಿ, ನಾಯಕತ್ವ ನಿರ್ವಹಣೆ ಮತ್ತು ಪಠ್ಯೇತರ ಚಟುವಟಿಕೆಗಳು ಸೇರಿದಂತೆ 10 ಮಾನದಂಡಗಳ ಮೇಲೆ ಈ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ ಎಂದು ಕಾರ್ಯದರ್ಶಿ ಡಾ. ರವಿ ಹರ್ಷ ಹೇಳಿದ್ದಾರೆ.
TAGGED:
India School Merit Award