ಕಲಬುರಗಿ : ಸಾರಿಗೆ ನೌಕರರ ಕೆಲಸದ ಭಾರ ತಗ್ಗಿಸುವುದೂ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ KSRTC ಸ್ಟಾಫ್ ಅಂಡ್ ವರ್ಕಸ್ ಫೆಡರೇಷನ್ ನೇತೃತ್ವದಲ್ಲಿ ಕಲಬುರ್ಗಿಯ NEKSRTC ಕೇಂದ್ರ ಕಚೇರಿಯ ಸಾರಿಗೆ ಸದನದ ಎದುರು ಧರಣಿ ಸತ್ಯಾಗ್ರಹ ನಡೆಯಿತು.
ಕೆಲಸದ ಅವಧಿ, ಮೇಲಾಧಿಕಾರಿಗಳ ಕಿರುಕುಳ ತಡೆಗೆ ಒತ್ತಾಯ.. ಕಲಬುರ್ಗಿಯಲ್ಲಿ KSRTC ಸಿಬ್ಬಂದಿ ಸತ್ಯಾಗ್ರಹ - Kalburgi
ಕೂಡಲೇ ಕೆಲಸದ ಅವಧಿ ಹೆಚ್ಚಳ ಹಿಂತೆಗೆದುಕೊಳ್ಳಬೇಕು ಮತ್ತು ಕಾರ್ಮಿಕರಿಗೆ ಮೇಲಿನ ಅಧಿಕಾರಿಗಳು ಅನಾವಶ್ಯಕ ಕಿರುಕುಳ ನೀಡುವುದನ್ನ ತಪ್ಪಿಸುವುದೂ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ KSRTC ಸಿಬ್ಬಂದಿ ಸತ್ಯಾಗ್ರಹ ನಡೆಸಿದರು.
KSRTC ಸಿಬ್ಬಂಧಿಗಳಿಂದ ಸತ್ಯಾಗ್ರಹ
ಪ್ರಸಕ್ತ ಸಂಸ್ಥೆಯಲ್ಲಿ ಜಾರಿಯಲ್ಲಿರುವ ಅವೈಜ್ಞಾನಿಕ ಫಾರಂ-4ರಿಂದ ಚಾಲಕ ಮತ್ತು ನಿರ್ವಾಹಕರ ಮೇಲೆ ಕೆಲಸದ ಅವಧಿ ಹೆಚ್ಚಾಗಿದ್ದು ಒತ್ತಡ ಹೆಚ್ಚುತ್ತಿದೆ. ಆದ್ದರಿಂದ ಕೂಡಲೇ ಕೆಲಸದ ಅವಧಿ ಹೆಚ್ಚಳ ಹಿಂತೆಗೆದುಕೊಳ್ಳಬೇಕು ಮತ್ತು ಕಾರ್ಮಿಕರಿಗೆ ಮೇಲಿನ ಅನಾವಶ್ಯಕ ಕಿರುಕುಳ ತಪ್ಪಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.
TAGGED:
Kalburgi