ಕಲಬುರಗಿ :ಶ್ರಾವಣ ಮಾಸದ 2ನೇ ಶುಕ್ರವಾರದಂದು ಆಚರಿಸುವ ವರಮಹಾಲಕ್ಷ್ಮಿ ಹಬ್ಬವನ್ನು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಅತ್ಯಂತ ಸಡಗರ, ಸಂಭ್ರಮದಿಂದ ಆಚರಣೆ ಮಾಡಲಾಗಿದೆ.
ನಗರದ ಪ್ರತಿ ಮನೆಗಳಲ್ಲಿಯೂ ತಾಯಿ ವರಮಹಾಲಕ್ಷ್ಮಿಯ ವೈಭವ ಜೋರಾಗಿದೆ. ವಿಶೇಷವಾಗಿ ಮಹಾಲಕ್ಷ್ಮಿನಗರದ ಲಕ್ಷ್ಮಿಕಾಂತ್ ತಡಕಲ್ ಮನೆಯಲ್ಲಿ ಇಡೀ ಬಡಾವಣೆಯ ಮಹಿಳೆಯರೆಲ್ಲ ಸೇರಿ ವಿಶೇಷವಾಗಿ ದೇವಿಗೆ ಅಲಂಕಾರ ಮಾಡಿ ಪೂಜೆ ಸಲ್ಲಿಸಿದ್ದಾರೆ. ಜೊತೆಗೆ ಮುತ್ತೈದೆಯರಿಗೆ ಉಡಿ ತುಂಬುವ ಮೂಲಕ ಪಾರಂಪರಿಕವಾಗಿ ನಡೆದುಕೊಂಡು ಬಂದಿರುವ ಹಬ್ಬಗಳನ್ನು ಶ್ರದ್ಧಾ ಭಕ್ತಿಯಿಂದ ಆಚರಣೆ ಮಾಡಿದರು.