ಕರ್ನಾಟಕ

karnataka

ETV Bharat / state

ಹೆಚ್​ಡಿಕೆ ಹೆಚ್ಚೆಚ್ಚು ಪುಸ್ತಕ ಓದುತ್ತಿದ್ದಾರೆ, ಹೀಗಾಗಿ ಅವರ ಭಾವನೆ ಬದಲಾಗುತ್ತಿದೆ: ವಿ. ಸೋಮಣ್ಣ - ಮಾಜಿ ಮುಖ್ಯಮಂತ್ರಿ ಹೆಚ್​​​​​ಡಿ ಕುಮಾರಸ್ವಾಮಿ

ಕುಮಾರಸ್ವಾಮಿ ಇತ್ತೀಚಿಗೆ ಜಾಸ್ತಿ ಪುಸ್ತಗಳನ್ನು ಓದುತ್ತಿದ್ದಾರೆ. ಕಾಲೇಜಿನಲ್ಲಿ ಓದಿದ್ದಕ್ಕಿಂತಲೂ ಹೆಚ್ಚಿನ ಪುಸ್ತಕಗಳನ್ನು ಈಗ ಓದುತ್ತಿದ್ದಾರೆ. ಹೀಗಾಗಿ ಆರ್‌ಎಸ್‌ಎಸ್ ವಿಚಾರದಲ್ಲಿ ಅವರ ಭಾವನೆಗಳು ಬದಲಾಗುತ್ತಿವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್​​.ಡಿ.ಕುಮಾರಸ್ವಾಮಿಯವರ ಹೇಳಿಕೆಗೆ ಸಚಿವ ವಿ. ಸೋಮಣ್ಣ ಪ್ರತಿಕ್ರಿಯಿಸಿದರು.

v-somanna-statement-on-kumaraswamy-rss-statement
ಸಚಿವ ವಿ ಸೋಮಣ್ಣನ

By

Published : Oct 7, 2021, 4:08 PM IST

ಕಲಬುರಗಿ: ಬಿಜೆಪಿಯಲ್ಲಿನ ಆಂತರಿಕ ಕಚ್ಚಾಟದಿಂದ ಯಡಿಯೂರಪ್ಪ ಅವರ ಬೆಂಬಲಿಗರ ಮೇಲೆ ಐಟಿ ದಾಳಿ ಆಗುತ್ತಿದೆ ಎಂಬ ಮಾಜಿ ಮುಖ್ಯಮಂತ್ರಿ ಹೆಚ್​​​​.ಡಿ. ಕುಮಾರಸ್ವಾಮಿಯವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಸಚಿವ ವಿ. ಸೋಮಣ್ಣ ಅವರು ಕುಮಾರಸ್ವಾಮಿಗೆ ಇದನ್ನು ಬಿಟ್ಟು ಹೇಳಲು ಮತ್ತೇನಿದೆ ಅಂತ ವ್ಯಂಗ್ಯವಾಡಿದರು.

ಹೆಚ್​ಡಿಕೆ ಹೆಚ್ಚೆಚ್ಚು ಪುಸ್ತಕ ಓದುತ್ತಿದ್ದಾರೆ, ಹೀಗಾಗಿ ಅವರ ಭಾವನೆ ಬದಲಾಗುತ್ತಿದೆ

ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾದವರು. ಅವರ ತಂದೆ ಪ್ರಧಾನಿಯಾದವರು, ರಾಜಕಾರಣದಲ್ಲಿಯೇ ಹುಟ್ಟಿ ಬೆಳೆದವರು. ಹಾಗಾಗಿ ಅವರದೇಯಾದ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಆದ್ರೆ ಭಾರತೀಯ ಜನತಾ ಪಕ್ಷ ದೇಶದಲ್ಲಿ ಹಾಗೂ ರಾಜ್ಯದಲ್ಲಿ ತನ್ನದೇ ಆದ ಕೊಡುಗೆ ಕೊಡುವ ಮುಖೇನ ಎಲ್ಲಾ ವರ್ಗದವರನ್ನೂ ಸರಿ ಸಮನಾಗಿ ತೆಗೆದುಕೊಂಡು ಹೋಗುತ್ತಿರುವ ಪಕ್ಷ. ನಮ್ಮಲ್ಲಿ ಯಾವುದೇ ರೀತಿಯ ಆಂತರಿಕ ಕಚ್ಚಾಟ ಇಲ್ಲ. ಯಡಿಯೂರಪ್ಪ ನಮ್ಮ‌ ಪಕ್ಷದ ಪಕ್ಷಾತೀತ ನಾಯಕರು ಎಂದು ಸ್ಪಷ್ಟಪಡಿಸಿದರು.

ಕುಮಾರಸ್ವಾಮಿಯವರು ಹೆಚ್ಚು ಪುಸ್ತಕ ಓದುತ್ತಿದ್ದಾರೆ: ಕುಮಾರಸ್ವಾಮಿ ಇತ್ತೀಚಿಗೆ ಜಾಸ್ತಿ ಪುಸ್ತಗಳನ್ನು ಓದುತ್ತಿದ್ದಾರೆ. ಕಾಲೇಜಿನಲ್ಲಿ ಓದಿದ್ದಕ್ಕಿಂತಲೂ ಹೆಚ್ಚಿನ ಪುಸ್ತಕಗಳನ್ನು ಈಗ ಓದುತ್ತಿದ್ದಾರೆ. ಹೀಗಾಗಿ ಆರ್‌ಎಸ್‌ಎಸ್ ವಿಚಾರದಲ್ಲಿ ಅವರ ಭಾವನೆಗಳು ಬದಲಾಗುತ್ತಿವೆ. ಕುಮಾರಸ್ವಾಮಿ ಅವಶ್ಯಕತೆ ಇಲ್ಲದ ವಿಚಾರವನ್ನು ಪದೇಪದೇ ಉಲ್ಲೇಖಿಸುವುದು ಸರಿಯಲ್ಲ ಎಂದು ಹೇಳುವ ಮೂಲಕ ಆರ್‌ಎಸ್‌ಎಸ್ ನಿಂದ ಮುಂದೊಂದು ದಿನ ದೇಶ ಹಾಳಾಗಲಿದೆ ಎಂಬ ಹೆಚ್​​ಡಿಕೆ ಹೇಳಿಕೆಗೆ ತಿರುಗೇಟು ನೀಡಿದರು.

ನಾನು ಕೂಡ ಆರ್​ಎಸ್​ಎಸ್​​​ನಲ್ಲಿ ಇದ್ದವನು. ಈ ದೇಶಕ್ಕೆ ಸ್ವಾರ್ಥವಿಲ್ಲದೆ ಕೆಲಸ ಮಾಡುತ್ತಿರುವ, ಒಳ್ಳೆಯ ಸಂದೇಶ ನೀಡುತ್ತಿರುವ, ತತ್ವನಿಷ್ಠೆಯಿಂದ ಉಳ್ಳಂತಹ ಸಂಸ್ಥೆ ಆರ್​ಎಸ್​ಎಸ್, ಅದರ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ. ಕುಮಾರಸ್ವಾಮಿ ಅವರೊಟ್ಟಿಗೆ ಈ ವಿಚಾರವಾಗಿ ಮಾತಾಡಿದ್ದೇನೆ ಮತ್ತೆ ಸಿಕ್ಕರೆ ಮತ್ತೊಮ್ಮೆ ಮಾತನಾಡುವೆ ಎಂದು ಸೋಮಣ್ಣ ಹೇಳಿದರು.

ಸಿಂದಗಿ ಚುನಾವಣೆ ನಮಗೆ ಕಷ್ಟವೇನಲ್ಲ: ಸಿಂದಗಿ ಉಪಚುನಾವಣೆ ಕುರಿತು ಮಾತನಾಡಿದ ಸೋಮಣ್ಣ, ನಮಗೆ ಅಲ್ಪಸಂಖ್ಯಾತರು ಬೇರೆಯವರು ಎಂಬ ಭೇದವಿಲ್ಲ. ರಾಜ್ಯದ ಆರೂವರೆ ಕೋಟಿ ಜನ ನಮಗೆ ಒಂದೇ. ನಮ್ಮ ಸರ್ಕಾರ ಜನಪರ ಕೆಲಸಗಳನ್ನು ಮಾಡುತ್ತಿದೆ. ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಕೊಡುಗೆ, ಯಡಿಯೂರಪ್ಪನವರ ಜನಪರ ಕಾರ್ಯ, ಬಸವರಾಜ ಬೊಮ್ಮಾಯಿ ಅವರ ಚಿಂತನೆ ಆಧಾರದ ಮೇಲೆ ನಾವು ಉಪಚುನಾವಣೆಯನ್ನು ಗೆಲ್ಲುತ್ತೇವೆ. ಉಪ ಚುನಾವಣೆಯಲ್ಲಿ ಗೋವಿಂದ ಕಾರಜೋಳ, ಬಸನಗೌಡ ಪಾಟೀಲ್​ ಯತ್ನಾಳ ಸೇರಿದಂತೆ ಕಲಬುರಗಿ, ವಿಜಯಪುರ ಜಿಲ್ಲೆಯ ನಾಯಕರು ಎಲ್ಲರೂ ಒಂದಾಗಿ ಉಪಚುನಾಣೆಯಲ್ಲಿ ಕೆಲಸ ಮಾಡ್ತೇವೆ. ಹೀಗಾಗಿ ನಮಗೆ ಸಿಂದಗಿ ಚುನಾವಣೆ ಗೆಲ್ಲುವುದು ಕಷ್ಟವಾಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ABOUT THE AUTHOR

...view details