ಕಲಬುರಗಿ: ಕೋಟ್ಯಂತರ ಭಕ್ತರ ಸಮೂಹವನ್ನು ಹೊಂದಿರುವ ಜಿಲ್ಲೆಯ ಸೇಡಂ ತಾಲೂಕಿನ ಕಾಗಿಣಾ ನದಿ ತಟದಲ್ಲಿನ ಉತ್ತರಾದಿ ಮಠ ಸದ್ಯ ವಿವಾದದ ಕೇಂದ್ರಬಿಂದುವಾಗಿ ಮಾರ್ಪಟ್ಟಿದೆ. ಬೃಂದಾವನ ಅಂದ್ರೆ ಭಕ್ತಗಣಕ್ಕೆ ಪರಮಾನಂದ. ಅಂತಹ ಬೃಂದಾವನದ ಬಗ್ಗೆ ಇದೀಗ ಬಹಿರಂಗ ಚರ್ಚೆಯಾಗಿ ಮತ್ತೆ ವಿವಾದ ಹುಟ್ಟಿಕೊಂಡಿದೆ.
ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಕಾಗಿಣಾ ನದಿ ತಟದಲ್ಲಿನ ಉತ್ತರಾದಿ ಮಠ ಕೋಟಿ ಕೋಟಿ ಭಕ್ತ ಸಮಾಜವನ್ನು ಹೊಂದಿದೆ. ಅಂತಹ ಉತ್ತರಾದಿ ಮಠದಲ್ಲಿನ ಜಯತೀರ್ಥರ ಮೂಲ ಬೃಂದಾವನದ ಬಗ್ಗೆ ರಾಯರ ಮಠದ ಭಕ್ತಗಣ ಆಕ್ಷೇಪ ಎತ್ತಿದ್ದು, ಉತ್ತರಾದಿ ಮಠದ ಭಕ್ತರನ್ನು ಕೆರಳಿಸುವಂತೆ ಮಾಡಿದೆ. ಮಳಖೇಡದಲ್ಲಿರೋದು ಮೂಲ ಬೃಂದಾವನವಲ್ಲ. ಆನೆಗೊಂದಿಯ ನವ ವೃಂದಾವನದಲ್ಲಿರೋದೇ ಮೂಲ ಬೃಂದಾವನ. ಹಾಗಾಗಿ ಅದುವೇ ಶ್ರೇಷ್ಠ ಅನ್ನೋ ಮಂತ್ರಾಲಯ ಶ್ರೀಗಳ ಮಾತಿನ ಕುರಿತು ಇದೀಗ ಎಲ್ಲೆಡೆ ಚರ್ಚೆ ಆಗ್ತಿದೆ.