ಕಲಬುರಗಿ: ಲಾಕ್ಡೌನ್ನಿಂದ ಜಿಲ್ಲೆಯಲ್ಲಿ ಸಿಲುಕಿಕೊಂಡಿದ್ದ ಉತ್ತರ ಪ್ರದೇಶದ ವಲಸಿಗರನ್ನು ಕಲಬುರಗಿಯಿಂದ ಲಖನೌಗೆ ಶ್ರಮಿಕ್ ರೈಲು ಮೂಲಕ ಕಳುಹಿಸಲಾಯಿತು.
ಕಲಬುರಗಿಯಿಂದ ಶ್ರಮಿಕ್ ರೈಲು ಏರಿದ ಉತ್ತರ ಪ್ರದೇಶದ 1,500 ವಲಸಿಗ ಕಾರ್ಮಿಕರು - ಕಾರ್ಮಿಕರಿಗೆ ಆರೋಗ್ಯ ತಪಾಸಣೆ
ಲಾಕ್ಡೌನ್ ಸಡಿಲಿಕೆ ಹಿನ್ನೆಲೆ ಕಲಬುರಗಿಯಿಂದ ಉತ್ತರ ಪ್ರದೇಶಕ್ಕೆ ವಲಸೆ ಕಾರ್ಮಿಕರು ಪ್ರಯಾಣ ಬೆಳೆಸಿದ್ದಾರೆ. ಕಲಬುರಗಿ ರೈಲ್ವೆ ನಿಲ್ದಾಣದಿಂದ ಶ್ರಮಿಕ್ ರೈಲಿನ ಮೂಲಕ ಸುಮಾರು 1,500 ಕಾರ್ಮಿಕರು ತಮ್ಮ ತವರು ಊರಿಗೆ ತೆರಳಿದ್ದಾರೆ.
![ಕಲಬುರಗಿಯಿಂದ ಶ್ರಮಿಕ್ ರೈಲು ಏರಿದ ಉತ್ತರ ಪ್ರದೇಶದ 1,500 ವಲಸಿಗ ಕಾರ್ಮಿಕರು Uttar Pradesh workers got Shramik train from Kalaburagi](https://etvbharatimages.akamaized.net/etvbharat/prod-images/768-512-7266860-265-7266860-1589904249342.jpg)
ಕಲಬುರಗಿಯಿಂದ ಶ್ರಮಿಕ್ ರೈಲು ಏರಿದ ಉತ್ತರ ಪ್ರದೇಶದ ಕಾರ್ಮಿಕರು
ರೈಲು ನಿಲ್ದಾಣಕ್ಕೆ ಆಗಮಿಸಿದ ವಲಸಿಗ ಕಾರ್ಮಿಕರನ್ನು ಆರೋಗ್ಯ ಇಲಾಖೆಯ ಸಿಬ್ಬಂದಿ ರೈಲ್ವೆ ನಿಲ್ದಾಣದಲ್ಲಿ ತಪಾಸಣೆ ನಡೆಸಿದರು. ರೈಲಿನಲ್ಲಿ ಸುಮಾರು 1,500 ಕಾರ್ಮಿಕರು ತಮ್ಮ ತವರು ಊರುಗಳಿಗೆ ತೆರಳುತ್ತಿದ್ದಾರೆ.