ಕಲಬುರಗಿ: ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಇದರಿಂದ ಎಚ್ಚೆತ್ತ ಹಳ್ಳಿ ಜನರು ತಮ್ಮ ಗ್ರಾಮಗಳಲ್ಲಿ ಕಟ್ಟೆಮೇಲೆ ಜನ ಸೇರದಂತೆ ಹೊಸ ಪ್ಲಾನ್ ರೂಪಿಸಿದ್ದಾರೆ.
ಕಲಬುರಗಿಯಲ್ಲಿ ಹೆಚ್ಚಿದ ಸೋಂಕು: ಕಟ್ಟೆಗಳ ಮೇಲೆ ಜನ ಕೂರದಂತೆ ಹೊಸ ಐಡಿಯಾ - corona news
ಹಳ್ಳಿಗಳಲ್ಲಿ ಎಚ್ಚೆತ್ತುಕೊಳ್ಳದ ಕೆಲ ಜನರು ದೇವರ ಗುಡಿ ಕಟ್ಟೆ , ಗ್ರಾಮ ಪಂಚಾಯತ್ ಕಚೇರಿ ಕಟ್ಟೆ, ಮನೆಗಳ ಮುಂದೆ ಇರುವ ಕಟ್ಟೆಗಳ ಮೇಲೆ ಗುಂಪಾಗಿ ಕುಳಿತು ಹರಟೆ ಹೊಡೆಯುತ್ತಿದ್ದಾರೆ. ಇದನ್ನು ತಡೆಯಲು ಕಟ್ಟೆಗಳ ಮೇಲೆ ಆಯಿಲ್ ಸುರಿದು ಜನರು ಗುಂಪು ಸೇರದಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮುನ್ನೆಚ್ಚರಿಕೆ ವಹಿಸಲಾಗಿದೆ.
ಕೊರೊನಾ ವೈರಸ್ ಉಲ್ಭಣಗೊಳ್ಳುತ್ತಿರುವ ಹಿನ್ನೆಲೆ ಕಲಬುರಗಿ ಜಿಲ್ಲೆಯನ್ನು ರೆಡ್ ಜೋನ್ ಎಂದು ಘೋಷಿಸಲಾಗಿದೆ. ಆದರೂ ಹಳ್ಳಿಗಳಲ್ಲಿ ಎಚ್ಚೆತ್ತುಕೊಳ್ಳದ ಕೆಲ ಜನರು ದೇವರ ಗುಡಿ ಕಟ್ಟೆ , ಗ್ರಾಮ ಪಂಚಾಯತ್ ಕಚೇರಿ ಕಟ್ಟೆ, ಮನೆಗಳ ಮುಂದೆ ಇರುವ ಕಟ್ಟೆಗಳ ಮೇಲೆ ಗುಂಪಾಗಿ ಕುಳಿತು ಹರಟೆ ಹೊಡೆಯುತ್ತಿದ್ದಾರೆ. ಇದನ್ನು ತಡೆಯಲು ಕಟ್ಟೆಗಳ ಮೇಲೆ ಆಯಿಲ್ ಸುರಿದು ಜನರು ಗುಂಪು ಸೇರದಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮುನ್ನೆಚ್ಚರಿಕೆ ವಹಿಸಲಾಗಿದೆ.
ಜಿಲ್ಲೆಯ ಕೌಲಗಾ (ಕೆ) ಗ್ರಾಮದಲ್ಲಿ ಈಗಾಗಲೇ ಒಂದು ವರ್ಷದ ಮಗುವಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತ ಇಡಿ ಕೌಲಗಾ (ಕೆ) ಗ್ರಾಮವನ್ನು ಸೀಲ್ ಡೌನ್ ಮಾಡಿದೆ. ಗ್ರಾಮಸ್ಥರಲ್ಲಿ ಭಯ, ಭೀತಿ ಉಂಟಾಗಿದ್ದು, ಕೊರೊನಾ ಬಗ್ಗೆ ಎಚ್ಚರ ವಹಿಸುತ್ತಿದ್ದಾರೆ.