ಕರ್ನಾಟಕ

karnataka

ETV Bharat / state

ಜನತಾ ಕರ್ಫ್ಯೂಗೆ ಅಭೂತಪೂರ್ವ ಬೆಂಬಲ: ಸ್ತಬ್ಧವಾದ ಸೇಡಂ ನಗರ - ಸ್ತಬ್ಧವಾದ ಸೇಡಂ ನಗರ

ಕೊರೊನಾ ತಡೆಗೆ ಕಲಬುರಗಿಯ ಸೇಡಂ ಪಟ್ಟಣ ಸೇರಿದಂತೆ ಇಡೀ ತಾಲೂಕೇ ಸ್ತಬ್ಧವಾಗಿದೆ. ಪ್ರಧಾನಿ ಮೋದಿ ಕರೆಕೊಟ್ಟ ಜನತಾ ಕರ್ಫ್ಯೂಗೆ ಎಲ್ಲಿಲ್ಲದ ಬೆಂಬಲ ದೊರೆತಿದ್ದು, ಶೇ. 99 ಜನ ರಸ್ತೆಗಿಳಿದಿರಲಿಲ್ಲ.

Unprecedented support for the Janata curfew
ಜನತಾ ಕರ್ಫ್ಯೂಗೆ ಅಭೂತಪೂರ್ವ ಬೆಂಬಲ

By

Published : Mar 22, 2020, 5:56 PM IST

ಸೇಡಂ: ಕೊರೊನಾ ಸೋಂಕು ಹರಡುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಕರೆ ನೀಡಿರುವ ಜನತಾ ಕರ್ಫ್ಯೂಗೆ ಕಲಬುರಗಿಯ ಸೇಡಂನಲ್ಲಿ ಅಭೂತಪೂರ್ವ ಬೆಂಬಲ ದೊರೆತಿದೆ.

ಜನತಾ ಕರ್ಫ್ಯೂಗೆ ಅಭೂತಪೂರ್ವ ಬೆಂಬಲ

ಬೆಳಗ್ಗೆಯಿಂದ ಬಹುತೇಕ ಜನ ರಸ್ತೆಗಿಳಿಯದ ಪರಿಣಾಮ ಇಡೀ ತಾಲೂಕು ಸ್ತಬ್ಧವಾಗಿದೆ. ಬಹುತೇಕ ರಸ್ತೆಗಳಲ್ಲಿ ಸ್ಮಶಾನ ಮೌನ ಆವರಿಸಿತ್ತು. ಮೆಡಿಕಲ್ಸ್​​ ಹೊರತುಪಡಿಸಿ ಬಹುತೇಕ ಅಂಗಡಿಗಳು ಬಂದ್ ಆಗಿದ್ದವು. ವಾಹನ ಸಂಚಾರ ಸಂಪೂರ್ಣ ಬಂದ್ ಆಗಿದ್ದು, ಬಸ್ ನಿಲ್ದಾಣ, ಆಟೋ ನಿಲ್ದಾಣಗಳು ಬಿಕೋ ಎನ್ನುತ್ತಿದ್ದವು.

ಗ್ರಾಮೀಣ ಭಾಗಗಳಲ್ಲೂ ಜನತಾ ಕರ್ಫ್ಯೂಗೆ ಎಲ್ಲಿಲ್ಲದ ಬೆಂಬಲ ದೊರೆತಿದ್ದು, ಗ್ರಾಮಗಳೂ ಸ್ತಬ್ಧವಾಗಿವೆ. ಸಿಪಿಐ ರಾಜಶೇಖರ ಹಳಗೋದಿ, ಪಿಎಸ್ಐ ಸುಶೀಲಕುಮಾರ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಅನ್ನು ಪಟ್ಟಣಕ್ಕೆ ಕಲ್ಪಿಸಲಾಗಿತ್ತು.

ABOUT THE AUTHOR

...view details