ಕಲಬುರಗಿ :ಜಿಲ್ಲೆಯಲ್ಲಿಕಳೆದ ರಾತ್ರಿ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಗೆ ರೈತರು ಬೆಳೆದಿದ್ದ ಪಪ್ಪಾಯ ಭಾರಿ ಪ್ರಮಾಣದಲ್ಲಿ ಹಾನಿಯಾಗಿದೆ. ಇದರಿಂದಾಗಿ ರೈತರು ಆತಂಕಗೊಂಡಿದ್ದಾರೆ.
ಅಕಾಲಿಕ ಮಳೆ ತಂದ ಆಪತ್ತು.. ರೈತ ಬೆಳೆದ ಲಕ್ಷಾಂತರ ರೂ. ಮೌಲ್ಯದ ಪಪ್ಪಾಯ ಮಣ್ಣುಪಾಲು! - kalburgi rain news
ಜಿಲ್ಲೆಯ ಹಲವೆಡೆಯೂ ಲಕ್ಷಾಂತರ ರೂಪಾಯಿ ಬೆಲೆಯ ಪಪ್ಪಾಯಿ ಬೆಳೆ ಹಾನಿಯಾಗಿದೆ. ಸಂಕಷ್ಟಕ್ಕೀಡಾಗಿರುವ ಸಂತ್ರಸ್ತ ರೈತರು ಹಾನಿಯ ಬಗ್ಗೆ ಸಮೀಕ್ಷೆ ನಡೆಸಿ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿದ್ದಾರೆ.
ಅಕಾಲಿಕ ಮಳೆ ತಂದ ಆಪತ್ತು
ಕಾಳಗಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಕಮಲಾಬಾಯಿ ಎಂಬುವರಿಗೆ ಸೇರಿದ 2.20 ಎಕರೆ ಪಪ್ಪಾಯ ನೆಲಸಮವಾಗಿದೆ. ಜಿಲ್ಲೆಯ ಹಲವೆಡೆಯೂ ಪಪ್ಪಾಯ ಬೆಳೆ ಹಾನಿಯಾಗಿದೆ. ಲಕ್ಷಾಂತರ ರೂಪಾಯಿ ಬೆಳೆ ಹಾನಿ ಸಂಭವಿಸಿದೆ. ಬೆಳೆ ಹಾನಿಯ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ನೀಡುವಂತೆ ಸಂತ್ರಸ್ತ ರೈತರು ಆಗ್ರಹಿಸಿದ್ದಾರೆ.