ಕರ್ನಾಟಕ

karnataka

ETV Bharat / state

ರಾಜಕಾರಣಿಗಳು-ಪತ್ರಕರ್ತರ ನಡುವೆ ಬಿಡಿಸಲಾಗದ ನಂಟು: ಸಿಎಂ - ಕಲಬುರಗಿಯಲ್ಲಿ ರಾಜ್ಯ ಪತ್ರಕರ್ತರ ಸಮಾವೇಶ

CM Bommai speaks on Journalists and politicians relation: ಕೈ ಬರಹದ ಮೂಲಕ‌ ಪ್ರಾರಂಭವಾದ ಪತ್ರಿಕಾರಂಗ ನಂತರ ಮೊಳೆ ಜೋಡಿಸುವ ಹಂತಕ್ಕೆ ಬಂದು ಈಗ ಮುಂದುವರೆದ ತಂತ್ರಜ್ಞಾನ ಅಳವಡಿಸಿಕೊಂಡು ಬಂದಿದೆ. ಆ ಕಾಲದಿಂದಲೂ ಪತ್ರಕರ್ತರು ಮೌಲ್ಯವನ್ನ ಉಳಿಸಿಕೊಂಡು ಬಂದಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು 36ನೇ ರಾಜ್ಯ ಪತ್ರಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ರಾಜಕಾರಣಿಗಳು-ಪತ್ರಕರ್ತರ ನಡುವೆ ಬಿಡಿಸಲಾಗದ ನಂಟು
ರಾಜಕಾರಣಿಗಳು-ಪತ್ರಕರ್ತರ ನಡುವೆ ಬಿಡಿಸಲಾಗದ ನಂಟು

By

Published : Jan 4, 2022, 7:28 PM IST

ಕಲಬುರಗಿ: ಸ್ವಾತಂತ್ರ್ಯ ಪೂರ್ವದಿಂದಲೂ ಪತ್ರಿಕಾರಂಗ ಕೆಲಸ ಮಾಡುತ್ತಾ ಬಂದಿದೆ. ಪತ್ರಿಕೆಗಳು ಸ್ವಾತಂತ್ರ್ಯ ಹೋರಾಟ ರೂಪಿಸುವಲ್ಲಿ ಬಹಳ ದೊಡ್ಡ ಪಾತ್ರ ನಿರ್ವಹಿಸಿವೆ. ಎರಡನೆಯ ಮಹಾಯುದ್ಧದ ನಂತರ ಪತ್ರಿಕಾರಂಗ ತನ್ನ ಸ್ವಂತಿಕೆಯನ್ನು ಅಳವಡಿಸಿಕೊಳ್ಳಲು ಪ್ರಾರಂಭಿಸಿತು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದ ಪೂಜ್ಯ ಶ್ರೀ ಬಸವರಾಜಪ್ಪ ಅಪ್ಪ ಸ್ಮಾರಕ ಭವನದಲ್ಲಿ ಆಯೋಜಿಸಲಾಗಿದ್ದ ಎರಡನೆಯ ದಿನದ 36ನೇ ರಾಜ್ಯ ಪತ್ರಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಕೈ ಬರಹದ ಮೂಲಕ‌ ಪ್ರಾರಂಭವಾದ ಪತ್ರಿಕಾರಂಗ ನಂತರ ಮೊಳೆ ಜೋಡಿಸುವ ಹಂತಕ್ಕೆ ಬಂದು ಈಗ ಮುಂದುವರೆದ ತಂತ್ರಜ್ಞಾನ ಅಳವಡಿಸಿಕೊಂಡು ಬಂದಿದೆ. ಆ ಕಾಲದಿಂದಲೂ ಪತ್ರಕರ್ತರು ಮೌಲ್ಯವನ್ನ ಉಳಿಸಿಕೊಂಡು ಬಂದಿದ್ದಾರೆ ಎಂದು ಬಣ್ಣಿಸಿದರು.

ಪತ್ರಿಕಾರಂಗಕ್ಕೆ ಬಹಳ ಸವಾಲುಗಳಿವೆ. ವ್ಯವಸ್ಥೆಯ ಒಳಗಿನ ಲೋಪದೋಷ ಹೊರತರಲು ಅಡ್ಡಿ ಆತಂಕ ಎದುರಿಸಿ ಸಿಡಿದೆದ್ದಿದೆ. ಹಾಗಾಗಿ ತನ್ನ ಸ್ವಾಮಿತ್ವವನ್ನ ಕಾಪಾಡಿಕೊಂಡು ಬಂದಿದೆ. ಜಾಗತೀಕರಣ, ಖಾಸಗೀಕರಣ, ಉದಾರೀರಿಕರಣ‌ದಿಂದಾಗಿ ಹಾಗೂ ಮಾರುಕಟ್ಟೆ ಆಧಾರಿತ ವ್ಯವಸ್ಥೆ ಅಸ್ತಿತ್ವಕ್ಕೆ ಬಂದಾಗ, ಕೇವಲ ಲಾಭ ನಷ್ಟ ಬಂದಾಗ ಮೌಲ್ಯಗಳ ಸ್ಥಾನ ಎಲ್ಲಿದೆ? ಅದನ್ನು ಉಳಿಸುವವರು ಯಾರು? ಎನ್ನುವ ಪ್ರಶ್ನೆಗಳು ಉದ್ಭವವಾಗುತ್ತವೆ. ಈ ಎಲ್ಲದರ ನಡುವೆ ಅಂತಃಕರಣವನ್ನು ಹಿಡಿದಿಟ್ಟುಕೊಳ್ಳುವುದು, ಮಾನವೀಯತೆಯನ್ನು ಅಳವಡಿಸಿಕೊಳ್ಳುವುದು ಮುಖ್ಯವಾಗುತ್ತದೆ. ಆಗ ಸಮಾಜದಲ್ಲಿ ಬಹಳ ದೊಡ್ಡ ಬದಲಾವಣೆ ಆಗಲಿದೆ ಎಂದರು.

36ನೇ ರಾಜ್ಯ ಮಟ್ಟದ ಪತ್ರಕರ್ತರ ಸಮಾವೇಶ ಉದ್ಘಾಟಿಸಿದ ಸಿಎಂ

ಮೃತಪಟ್ಟ ಪತ್ರಕರ್ತರಿಗೆ ಈಗಾಗಲೇ ಐದು ಲಕ್ಷ:

ಇಂದು ಪತ್ರಿಕೆ ನಡೆಸುವುದು ಕಷ್ಟದ ಕೆಲಸ. ಹಾಗಾಗಿ ಪತ್ರಿಕಾರಂಗದಲಿ ಕೆಲಸ ಮಾಡುವ ಪತ್ರಕರ್ತರಿಗೆ ಸರ್ಕಾರಿ ಸವಲತ್ತು ವಿಸ್ತರಣೆ ಮಾಡಲಿದ್ದೇವೆ. ಕೊರೊನಾ ಸಂದರ್ಭದಲ್ಲಿ ಪತ್ರಕರ್ತರು ಗಮನಾರ್ಹ ಕೆಲಸ ಮಾಡಿದ್ದಾರೆ ಹಾಗೂ ಸರ್ಕಾರಕ್ಕೆ ಹಾಗೂ ವ್ಯವಸ್ಥೆಯನ್ನು ಎಚ್ಚರಿಸುವ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿ, ಕೊರೊನಾದಿಂದ ಮೃತಪಟ್ಟ ಪತ್ರಕರ್ತರಿಗೆ ಈಗಾಗಲೇ ಐದು ಲಕ್ಷ ಪರಿಹಾರ ನೀಡಿದ್ದೇವೆ. ಇನ್ನುಳಿದವರಿಗೂ ಪರಿಹಾರವನ್ನು ಕೂಡಲೇ ವಿತರಿಸಲಾಗುವುದು ಎಂದು ಭರವಸೆ ನೀಡಿದ್ರು.

ಸಮಾಜಕ್ಕಾಗಿ ಕೆಲಸ ಮಾಡೋಣ :

ರಾಜಕಾರಣಿಗಳು ಹಾಗೂ ಪತ್ರಕರ್ತರ ನಡುವೆ ಬಿಡಿಸದ ನಂಟು ಎಂದು ಲಗು ಹಾಸ್ಯ ಮಾಡಿದ ಸಿಎಂ, ನಮ್ಮನ್ನು ಬಿಟ್ಟು ನೀವು, ನಿಮ್ಮನ್ನು ಬಿಟ್ಟು ನಾವಿರಲು ಆಗುವುದಿಲ್ಲ. ಹಾಗಾಗಿ ಒಳ್ಳೆ ಕೆಲಸಕ್ಕೆ‌ ನಾವು ‌ನೀವು ಜೊತೆಯಾಗಿ ಸಮಾಜಕ್ಕಾಗಿ ಕೆಲಸ ಮಾಡೋಣ. ನಿಮ್ಮಲ್ಲೂ ಕೂಡಾ ರಾಜಕಾರಣ ಇದೆ. ಒಗ್ಗಟ್ಟನ್ನು ಸಾಧಿಸುವ ಸಲುವಾಗಿ ಇರುತ್ತದೆ. ಇದರಿಂದ ನಮಗೆ ಒಳ್ಳೆಯ ಸಲಹೆ ಸಿಗುತ್ತದೆ ಎಂದು ಹೇಳಿದರು.

14,000 ಪೋಸ್ಟ್ ಗಳನ್ನು ಭರ್ತಿ ಮಾಡಬೇಕಿದೆ:

ಕಲಬುರಗಿ ಭಾಗದ‌ ಅಭಿವೃದ್ಧಿ ಜನರ ಭಾವನೆಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಸಲ್ಲಿಸಿ ಎಂದ ಸಿಎಂ, ಆರ್ಟಿಕಲ್ 371 J ಪ್ರಕಾರ ಸೌಲಭ್ಯವನ್ನು‌ ಕಟ್ಟು‌ನಿಟ್ಟಾಗಿ ಕೊಡಲಿದ್ದೇವೆ. ಕೆ ಕೆ ಆರ್ ಡಿಬಿಗೆ ₹3000 ಕೋಟಿಯನ್ನು ಬಜೆಟ್ ನಲ್ಲಿ ತೆಗೆದಿರಿಸಲಿದ್ದೇವೆ. ಈ ಭಾಗದಲ್ಲಿ ಖಾಲಿಯಿರುವ 14,000 ಪೋಸ್ಟ್ ಗಳನ್ನು ಭರ್ತಿ ಮಾಡಬೇಕಿದೆ. ಈ ಬಗ್ಗೆ ಈ ಭಾಗದ ಜನಪ್ರತಿನಿಧಿಗಳ ಸಭೆ ಕರೆಯಲಿದ್ದೇವೆ. ಇದಕ್ಕೆ ಆಡಳಿತಾತ್ಮಕ ಅನುಮೋದನೆ ಕೂಡಾ ನೀಡಲಿದ್ದೇವೆ. ಗ್ರಾಮೀಣ ಭಾಗದ ಪತ್ರಕರ್ತರಿಗೆ ಆರೋಗ್ಯ ಕಾರ್ಟ್ ಹಾಗೂ ಬಸ್ ಪಾಸ್ ಒದಗಿಸಲು ಮುಂದಿನ ಬಜೆಟ್​​ನಲ್ಲಿ ತೀರ್ಮಾನ ಮಾಡಲಿದ್ದೇವೆ ಎಂದು ಭರವಸೆ ನೀಡಿದರು.

ABOUT THE AUTHOR

...view details