ಕಲಬುರಗಿ: ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಗೆ ಉದ್ಯೊಗ ಅರಸಿ ಹೋಗಿ ಕಿಲ್ಲರ್ ಕೊರೊನಾದಿಂದ ಸಂಕಷ್ಟ ಎದುರಿಸಿ ವಾಪಸ್ ಆದ ಎಲ್ಲಾ ವಲಸಿಗರಿಗೂ ಜಾಬ್‍ಕಾರ್ಡ್ ವಿತರಿಸಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ನೀಡುವಂತೆ ಸಂಸದ ಉಮೇಶ ಜಾಧವ್ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ವಲಸೆ ಕಾರ್ಮಿಕರಿಗೂ ನರೇಗಾ ಅಡಿಯಲ್ಲಿ ಕೆಲಸ ಕೊಡಿ: ಅಧಿಕಾರಿಗಳಿಗೆ ಜಾಧವ್ ಸೂಚನೆ
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಭೆ ನಡೆಸಿದ ಅವರು, ಕೋವಿಡ್-19 ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಉದ್ಯೋಗ ಖಾತ್ರಿ ಯೋಜನೆ ಕುರಿತಂತೆ ಕೈಗೊಂಡ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಭೆ ನಡೆಸಿದ ಅವರು, ಕೋವಿಡ್-19 ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಉದ್ಯೋಗ ಖಾತ್ರಿ ಯೋಜನೆ ಕುರಿತಂತೆ ಕೈಗೊಂಡ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಿದರು. ಉದ್ಯೋಗ ಖಾತ್ರಿ ಯೋಜನೆಗೆ ಅನುದಾನ ಕೊರತೆ ಇದ್ದಲ್ಲಿ ತಿಳಿಸಿ, ಎಷ್ಟೇ ಅನುದಾನ ಬೇಕಾದರೂ ಸರ್ಕಾರದಿಂದ ತರಲು ಸಿದ್ಧ. ಯಾವ ವಲಸಿಗರಿಗೂ ಸಮಸ್ಯೆಯಾಗದಂತೆ ಕೂಲಿ ಕೆಲಸ ನೀಡಬೇಕೆಂದು ತಿಳಿಸಿದ್ದಾರೆ.
ಪ್ರತಿ ತಾಲೂಕಿನಲ್ಲಿ ಇದುವರಗೆ ನೀಡಿರುವ ಜಾಬ್‍ಕಾರ್ಡ್ ಹಾಗೂ ನೀಡಿರುವ ಮಾನವದಿನಗಳ ಕೆಲಸಗಳ ಬಗ್ಗೆ ಆಯಾ ತಾಲೂಕಿನ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಂದ ಮಾಹಿತಿ ಪಡೆದ ಸಂಸದರು, ಇಪ್ಪತ್ತು ಸಾವಿರಕಿಂತ ಹೆಚ್ಚು ಜಾಬ್ ಕಾರ್ಡ್‍ಗಳನ್ನು ವಿತರಿಸಿ ಉದ್ಯೋಗ ನೀಡಬೇಕು ಹಾಗೂ ತದನಂತರ ಬೇಗ ಕೂಲಿ ವೇತನ ತಲುಪುವಂತೆ ಮಾಡಬೇಕು ಎಂದು ತಾಕಿತು ಮಾಡಿದ್ದಾರೆ.