ಕಲಬುರಗಿ:ರಾಮಮಂದಿರ ವೃತ್ತದಲ್ಲಿ ಮರಳಿನ ಟಿಪ್ಪರ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರರಿಬ್ಬರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ.
ಕಲಬುರಗಿಯಲ್ಲಿ ರಸ್ತೆ ಅಪಘಾತ: ಸವಾರರಿಬ್ಬರು ದುರ್ಮರಣ - undefined
ರಾಮಮಂದಿರ ವೃತ್ತದಲ್ಲಿ ಮರಳಿನ ಟಿಪ್ಪರ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರರಿಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
![ಕಲಬುರಗಿಯಲ್ಲಿ ರಸ್ತೆ ಅಪಘಾತ: ಸವಾರರಿಬ್ಬರು ದುರ್ಮರಣ](https://etvbharatimages.akamaized.net/etvbharat/prod-images/768-512-3836330-thumbnail-3x2-klb.jpg)
ಟಿಪ್ಪರ್ ಹರಿದು ಬೈಕ್ ಸವಾರರಿಬ್ಬರ ದುರ್ಮರಣ
ಟಿಪ್ಪರ್ ಹರಿದು ಬೈಕ್ ಸವಾರರಿಬ್ಬರ ದುರ್ಮರಣ
ರಾಮಮಂದಿರ ವೃತ್ತದಲ್ಲಿ ಯಮಸ್ವರೂಪಿಯಾಗಿ ಬಂದ ಮರಳಿನ ಟಿಪ್ಪರ್ ದ್ವಿಚಕ್ರ ಸವಾರರಿಬ್ಬರ ಮೇಲೆ ಹರಿದಿದೆ. ಪರಿಣಾಮಸಿಂಧಗಿ ತಾಲೂಕಿನ ಆಲಮೇಲ ನಿವಾಸಿಗಳಾದ ಶಿವಲಾಲ್ (41), ನಿಂಗಪ್ಪ (31) ಸ್ಥಳದಲ್ಲೇ ಮೃತಪಟ್ಟರು. ಈ ವೇಳೆ ರಸ್ತೆಯಲ್ಲಿ ಗಾಯಾಳುಗಳ ರಕ್ತ ಹರಿದಿತ್ತು. ಘಟನೆ ನಡೆದ ಬಳಿಕ ಟಿಪ್ಪರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ವೇಳೆ ರೊಚ್ಚಿಗೆದ್ದ ಜನರನ್ನು ಚದುರಿಸಿ, ಕಾರ್ಯಾಚರಣೆ ಕೈಗೊಳ್ಳುವಲ್ಲಿ ಪೊಲೀಸರು ಹೈರಾಣಾದರು.
ಇಲ್ಲಿನ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.