ಕಲಬುರಗಿ: ಬೈಕ್ ಮತ್ತು ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಶಹಬಾದ್ ತಾಲೂಕಿನ ತೆಗನೂರು ಗ್ರಾಮದ ಬಳಿ ನಡೆದಿದೆ.
ಬೈಕ್-ಕಾರ್ ಅಪಘಾತ:ಬೈಕ್ ಸವಾರಿಬ್ಬರು ಸ್ಥಳದಲ್ಲೇ ದುರ್ಮರಣ - kalaburagi latest accident news
ಕಲಬುರಗಿಯ ಶಹಬಾದ್ ತಾಲೂಕಿನ ತೆಗನೂರು ಗ್ರಾಮದ ಬಳಿ ನಡೆದ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಬೈಕ್ ಸವಾರಿಬ್ಬರು ಸ್ಥಳದಲ್ಲೇ ಸಾವು
ವಾಡಿ ಪಟ್ಟದ ನಿವಾಸಿಗಳಾದ ಶಬೀರ್ ಹುಸೇನ್ (40) ಮತ್ತು ಮಹ್ಮದ್ ಶರೀಫ್ (40) ಮೃತಪಟ್ಟವರು. ತಡರಾತ್ರಿ ಕಲಬುರಗಿಯಿಂದ ವಾಡಿಗೆ ತೆರಳುವಾಗ ಬೈಕ್ ಹಾಗೂ ಕಾರ್ ನಡುವೆ ಡಿಕ್ಕಿ ಸಂಭವಿಸಿ ಘಟನೆ ನಡೆದಿದೆ. ಶಹಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.