ಕಲಬುರಗಿ: ಅವರಿಬ್ಬರು ಒಂದೇ ಗ್ರಾಮದವರು, ಚಿಕ್ಕಂದಿನಿಂದ ಒಟ್ಟಾಗಿ ಬೆಳೆದ ಕುಚುಕುಗಳು. ಎಲ್ಲಿಗೆ ಹೋದರೂ ಇಬ್ಬರೂ ಜೊತೆಯಾಗಿಯೇ ಹೋಗುತ್ತಿದ್ದರು. ಇದೀಗ ಸಾವಿನ ಮನೆಗೂ ಒಟ್ಟೊಟ್ಟಿಗೆ ಹೋಗಿರುವ ಹೃದಯವಿದ್ರಾವಕ ಘಟನೆ ಜಿಲ್ಲೆಯಲ್ಲಿ ಸಂಭವಿಸಿದೆ.
ಬಂದರವಾಡ ಗ್ರಾಮದ ಮಂಜುನಾಥ ತ್ರೀಶೂಲ್ (30) ಮತ್ತು ಮಂಜುನಾಥ ಪೂಜಾರಿ (30) ಸಾವಿನಲ್ಲೂ ಒಂದಾದ ಸ್ನೇಹಿತರು. ಇವರು ಅಫಜಲಪುರದಲ್ಲಿ ಕೆಲಸ ಮುಗಿಸಿಕೊಂಡು ರಾತ್ರಿ ಬೈಕ್ನಲ್ಲಿ ಊರಿಗೆ ಹಿಂದಿರುಗುತ್ತಿದ್ದ ವೇಳೆ ಮಲ್ಲಾಬಾದ್ ಬಳಿ ರಸ್ತೆ ಅಪಘಾತ ಸಂಭವಿಸಿದೆ. ಈ ವೇಳೆ ಸ್ಥಳದಲ್ಲೇ ಮಂಜುನಾಥ್ ಸಾವನ್ನಪ್ಪಿದ. ಇನ್ನೋರ್ವ ಮಂಜುನಾಥ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾನೆ.