ಕಲಬುರಗಿ: ಬಾವಿಯೊಂದರಲ್ಲಿ ಈಜಲು ಹೋಗಿದ್ದ ಇಬ್ಬರು ಮಕ್ಕಳು ನೀರು ಪಾಲಾಗಿರುವ ಘಟನೆ ಆಳಂದ ಪಟ್ಟಣದ ಹೊರವಲಯದಲ್ಲಿ ನಡೆದಿದೆ.
ಶ್ರೀಶೈಲ್ ಲಕ್ಷ್ಮಣ (13) ಹಾಗೂ ಲಕ್ಷ್ಮಣ ಗುಂಡಪ್ಪ(12) ಈಜಲು ಹೋಗಿ ಸಾವನ್ನಪ್ಪಿದ ದುರ್ದೈವಿಗಳು. ಈ ಇಬ್ಬರು ಮಕ್ಕಳು ಹೇಬಳಿ ರೋಡ್ ನ್ಯೂ ಬಾಳೇನಕೇರಿ ನಿವಾಸಿಗಳು ಎಂದು ತಿಳಿದು ಬಂದಿದೆ. ಇಂದು ಮಧ್ಯಾಹ್ನ ಇಬ್ಬರು ಈಜಲು ಎಂದು ಬಾವಿಗೆ ತೆರಳಿದ್ದಾರೆ. ಈಜು ಸರಿಯಾಗಿ ಬಾರದಿದ್ದರೂ ಬಾವಿಗೆ ಇಳಿದು ದುಸ್ಸಾಹಸ ಮಾಡಿದ್ದರಿಂದ ಅವಘಡ ಸಂಭವಿಸಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.