ಕಲಬುರಗಿ:ಹಳ್ಳ ದಾಟುವಾಗ ಪ್ರವಾಹಕ್ಕೆ ಸಿಲುಕಿ ಬಾಲಕರಿಬ್ಬರು ಸಾವನ್ನಪ್ಪಿರುವ ಘಟನೆ ಹಳೆ ಶಹಾಬಾದ್ ಬಡಾವಣೆ ಬಳಿ ಹರಿಯುವ ಅಜನಿ ಹಳ್ಳದಲ್ಲಿ ನಡೆದಿದೆ.
ಕಲಬುರಗಿ: ಹಳ್ಳ ದಾಟುವಾಗ ಪ್ರವಾಹಕ್ಕೆ ಸಿಲುಕಿ ಬಾಲಕರಿಬ್ಬರ ದುರ್ಮರಣ - ಕಲಬುರಗಿ ಜಿಲ್ಲೆ ಸುದ್ದಿ
ಕಳೆದ ರಾತ್ರಿ ಸುರಿದ ಭಾರಿ ಮಳೆಗೆ ಹಳೆ ಶಹಾಬಾದ್ಗೆ ಹೊಂದಿಕೊಂಡಿರುವ ಕೆರೆ ಭರ್ತಿಯಾಗಿದೆ. ಹಳ್ಳಕ್ಕೆ ಅಡ್ಡಲಾಗಿ ಕಟ್ಟಿರೋ ಚೆಕ್ ಡ್ಯಾಂ ದಾಟಲು ಹೋದಾಗ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ಕಲಬುರಗಿ: ಹಳ್ಳದಾಟುವಾಗ ಪ್ರವಾಹಕ್ಕೆ ಸಿಲುಕಿ ಬಾಲಕರಿಬ್ಬರ ದುರ್ಮರಣ..
ಶಹಾಬಾದ್ ನಗರದ ನಿವಾಸಿಗಳಾದ ವಿಶ್ವನಾಥ್ (14), ಪೂರ್ಣಚಂದ್ರ ಜಾಯಿ (15) ಮೃತ ಬಾಲಕರಾಗಿದ್ದಾರೆ. ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಹಳೆ ಶಹಾಬಾದ್ಗೆ ಹೊಂದಿಕೊಂಡಿರೋ ಕೆರೆ ತುಂಬಿದೆ. ಹಳ್ಳಕ್ಕೆ ಅಡ್ಡಲಾಗಿ ಕಟ್ಟಿರೋ ಚೆಕ್ ಡ್ಯಾಂ ದಾಟಲು ಹೋದಾಗ ದುರ್ಘಟನೆ ಸಂಭವಿಸಿದೆ ಎನ್ನಲಾಗಿದ್ದು, ಸ್ಥಳೀಯರ ಸಹಾಯದಿಂದ ಬಾಲಕರಿಬ್ಬರ ಶವಗಳನ್ನು ಹೊರ ತೆಗೆಯಲಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶಹಾಬಾದ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.