ಕರ್ನಾಟಕ

karnataka

ETV Bharat / state

ಸಾಹಿತ್ಯ ಸಮ್ಮೆಳನದಲ್ಲಿ ಬಹುರೂಪಿ ಪ್ರಕಾಶನದ ಎರಡು ಪುಸ್ತಕ ಬಿಡುಗಡೆ - Senior journalist and thinker Sanath Kumar Begalkali

ಕಲಬುರಗಿಯಲ್ಲಿಂದು ನಡೆದ ಎರಡನೇ ದಿನದ ಸಾಹಿತ್ಯ ಸಮ್ಮೇಳನದಲ್ಲಿ ಬಹುರೂಪಿ ಪ್ರಕಾಶನದ ಆಜಾದಿ ಕನ್ಹಯ್ಯಾ, ದಲಿತ ದನಿ ಜಿಗ್ನೇಶ್​ ಮತ್ತು ದಲಿತರು ಬರುವರು ದಾರಿ ಬಿಡಿ ಅನ್ನೋ ಎರಡು ಪುಸ್ತಕ ಬಿಡುಗಡೆ ಮಾಡಲಾಯಿತು.

Two book releases of multifaceted publishing at the literary conference
ಸಾಹಿತ್ಯ ಸಮ್ಮೆಳನದಲ್ಲಿ ಬಹುರೂಪಿ ಪ್ರಕಾಶನದ ಎರಡು ಪುಸ್ತಕ ಬಿಡುಗಡೆ

By

Published : Feb 6, 2020, 11:35 PM IST

ಕಲಬುರಗಿ: ಕಲಬುರಗಿಯಲ್ಲಿಂದು ನಡೆದ ಎರಡನೇ ದಿನದ ಸಾಹಿತ್ಯ ಸಮ್ಮೇಳನದಲ್ಲಿ ಬಹುರೂಪಿ ಪ್ರಕಾಶನದ ಆಜಾದಿ ಕನ್ಹಯ್ಯಾ, ದಲಿತ ದನಿ ಜಿಗ್ನೇಶ್​ ಮತ್ತು ದಲಿತರು ಬರುವರು ದಾರಿ ಬಿಡಿ ಅನ್ನೋ ಎರಡು ಪುಸ್ತಕ ಬಿಡುಗಡೆ ಮಾಡಲಾಯಿತು.

ಸಾಹಿತ್ಯ ಸಮ್ಮೆಳನದಲ್ಲಿ ಬಹುರೂಪಿ ಪ್ರಕಾಶನದ ಎರಡು ಪುಸ್ತಕ ಬಿಡುಗಡೆ

ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ಸಮ್ಮೇಳನದ ಪ್ರಮುಖ ವೇದಿಕೆ ಪಕ್ಕದಲ್ಲಿ ಅಳವಡಿಸಲಾದ ಪುಸ್ತಕ ಮಳಿಗೆಯ 151 ಮತ್ತು 152ನೇ ಮಳಿಗೆಯಲ್ಲಿ ಹಿರಿಯ ಪತ್ರಕರ್ತ ಹಾಗೂ ಚಿಂತಕ ಸನತ್​ಕುಮಾರ್ ಬೆಳಗಲಿ ಈ ಪುಸ್ತಕಗಳನ್ನು ಬಿಡುಗಡೆ ಮಾಡಿದರು.

ಪುಸ್ತಕ ಬಿಡುಗಡೆ ನಂತರ ಮಾತನಾಡಿದ ಅವರು, ಇಂದು ಬಿಡುಗಡೆ ಮಾಡಿದ ಪುಸ್ತಕಗಳು ಬಹಳ ಮಹತ್ವಪೂರ್ಣವಾದವು. ಸರ್ಕಾರದ ಮತ್ತು ಪ್ರಭುತ್ವದ ದಬ್ಬಾಳಿಕೆ ವಿರುದ್ಧ ದೇಶವೇ ಮೌನವಾದಾಗ ಯುವಕರು, ಪ್ರತಿಭಟನೆ ಧ್ವನಿ ಎತ್ತುವ ಮೂಲಕ ಸಮಾನತೆ,ಸೌಹಾರ್ದತೆಯುತ ಭಾರತ ಕಟ್ಟುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದರು.

ಅಲ್ಲದೆ, ಬಹುರೂಪಿ ಪ್ರಕಾಶನದ ಮೂಲಕ ಬಿಡುಗಡೆಯಾದ ಜಿಗ್ನೇಶ್ ಮೇವಾನಿ ಮತ್ತು ಕನ್ಹಯ್ಯಾ ಕುಮಾರ ಅಂತವರ ಸಂದರ್ಶನ ಪುಸ್ತಕಗಳು ಬಹಳಷ್ಟು ಮಹತ್ವ ಪಡೆದುಕೊಂಡಿವೆ ಎಂದರು.

ABOUT THE AUTHOR

...view details