ಕರ್ನಾಟಕ

karnataka

ETV Bharat / state

ಭಿಕ್ಷೆ ಬೇಡಿ ಹಣ ಕೊಡ್ತೇವೆ, ಬೈಎಲೆಕ್ಷನ್‌ನಲ್ಲಿ ಖರ್ಚು ಮಾಡಿ: ಸಾರಿಗೆ ನೌಕರರ ಆಕ್ರೋಶ - ಕಲಬುರಗಿ ಲೇಟೆಸ್ಟ್ ನ್ಯೂಸ್

ಸರ್ಕಾರ ನಡೆಯನ್ನು ವಿರೋಧಿಸಿ ಜಿಲ್ಲೆಯ ಅಫಜಲಪುರ ತಾಲೂಕು ಸಾರಿಗೆ ಸಿಬ್ಬಂದಿ ಭಿಕ್ಷಾಟನೆ ನಡೆಸಿ ಆಕ್ರೋಶ ಹೊರಹಾಕಿದರು.

transport employees different protest in kalburgi
ಭಿಕ್ಷೆ ಬೇಡಿ ಹಣ ಕೊಡ್ತೇವೆ, ಉಪಚುನಾವಣೆಯಲ್ಲಿ ಖರ್ಚು ಮಾಡಿ: ಸಾರಿಗೆ ನೌಕರರ ಆಕ್ರೋಶ!

By

Published : Apr 16, 2021, 12:28 PM IST

ಕಲಬುರಗಿ: ಭಿಕ್ಷೆ ಬೇಡಿ ಹಣ ಸಂಗ್ರಹಿಸಿ ಕೊಡುತ್ತೇವೆ, ಉಪ ಚುನಾವಣೆಯಲ್ಲಿ ಖರ್ಚು ಮಾಡಿ ಎಂದು ಸರ್ಕಾರದ ವಿರುದ್ಧ ಮುಷ್ಕರನಿರತ ಸಾರಿಗೆ ನೌಕರರು ಭಿಕ್ಷೆ ಬೇಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಭಿಕ್ಷಾಟನೆ ಮೂಲಕ ಆಕ್ರೋಶ ಹೊರಹಾಕಿದ ಸಾರಿಗೆ ನೌಕರರು

ಒಂದೆಡೆ, ಸಾರಿಗೆ ಸಿಬ್ಬಂದಿ ಬೇಡಿಕೆ ಈಡೇರಿಸುವವರೆಗೆ ಹೋರಾಟ ಕೈಬಿಡುವುದಿಲ್ಲ ಎಂದು ಪಟ್ಟುಹಿಡಿದು ಕುಳಿತರೆ, ಇನ್ನೊಂದೆಡೆ ಉಪಚುನಾವಣೆ ರಣತಂತ್ರದಲ್ಲಿ ನಾಯಕರು ತೊಡಗಿದ್ದಾರೆ. ಇದೇ ವೇಳೆ ದಿನದಿಂದ ದಿನಕ್ಕೆ ಹೋರಾಟ ತೀವ್ರ ಸ್ವರೂಪ ಪಡೆಯುತ್ತಿದೆ. ಇದೀಗ ಸರ್ಕಾರ ನಡೆಯನ್ನು ವಿರೋಧಿಸಿ ಜಿಲ್ಲೆಯ ಅಫಜಲಪುರ ತಾಲೂಕು ಸಾರಿಗೆ ಸಿಬ್ಬಂದಿ ಭಿಕ್ಷಾಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ:10ನೇ ದಿನಕ್ಕೆ ಕಾಲಿಟ್ಟ ಸಾರಿಗೆ ಮುಷ್ಕರ: 213 ಬಿಎಂಟಿಸಿ ಸಿಬ್ಬಂದಿ ಅಮಾನತು

ಸಾರಿಗೆ ನೌಕರರ ಕೆಲ ಮಕ್ಕಳೂ ಸಹ ಭಿಕ್ಷಾಟನೆಯ ಹೋರಾಟದಲ್ಲಿ ಭಾಗಿಯಾಗಿದ್ದರು.

ABOUT THE AUTHOR

...view details