ಕಲಬುರಗಿ:175.57 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಿರುವ ಕಲಬುರಗಿ ವಿಮಾನ ನಿಲ್ದಾಣದಿಂದ ವಾಣಿಜ್ಯ ಹಾರಾಟ ಪ್ರಾರಂಭಿಸುವ ಸಂಬಂಧ ವಿಮಾನ ನಿಲ್ದಾಣದ ಒಟ್ಟು 742.23 ಎಕರೆ ಪ್ರದೇಶವನ್ನ ಶುಕ್ರವಾರ ಕಲಬುರಗಿ ಜಿಲ್ಲಾಧಿಕಾರಿ ಬಿ.ಶರತ್, ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾದ ಕಲಬುರಗಿ ವಿಮಾನ ನಿಲ್ದಾಣದ ನಿರ್ದೇಶಕ ಎಸ್.ಜ್ಞಾನೇಶ್ವರ ರಾವ್ ಹಾಗೂ ಜಂಟಿ ಜನರಲ್ ಮ್ಯಾನೇಜರ್ ಎಂ.ಯಾದಯ್ಯ ಅವರಿಗೆ ಅಧಿಕೃತವಾಗಿ ಹಸ್ತಾಂತರಿಸಿದರು.
ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾಗೆ ಕಲಬುರಗಿ ವಿಮಾನ ನಿಲ್ದಾಣ ಪ್ರದೇಶ ಹಸ್ತಾಂತರ - Kalaburagi Airport News
ಕಲಬುರಗಿ ವಿಮಾನ ನಿಲ್ದಾಣದಿಂದ ವಾಣಿಜ್ಯ ಹಾರಾಟ ಪ್ರಾರಂಭಿಸುವ ಸಂಬಂಧ ವಿಮಾನ ನಿಲ್ದಾಣದ ಒಟ್ಟು 742.23 ಎಕರೆ ಪ್ರದೇಶವನ್ನ ಶುಕ್ರವಾರ ಕಲಬುರಗಿ ಜಿಲ್ಲಾಧಿಕಾರಿ ಬಿ.ಶರತ್, ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾದ ಕಲಬುರಗಿ ವಿಮಾನ ನಿಲ್ದಾಣದ ನಿರ್ದೇಶಕ ಎಸ್.ಜ್ಞಾನೇಶ್ವರ ರಾವ್ ಹಾಗೂ ಜಂಟಿ ಜನರಲ್ ಮ್ಯಾನೇಜರ್ ಎಂ.ಯಾದಯ್ಯ ಅವರಿಗೆ ಅಧಿಕೃತವಾಗಿ ಹಸ್ತಾಂತರಿಸಿದರು.
![ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾಗೆ ಕಲಬುರಗಿ ವಿಮಾನ ನಿಲ್ದಾಣ ಪ್ರದೇಶ ಹಸ್ತಾಂತರ](https://etvbharatimages.akamaized.net/etvbharat/prod-images/768-512-4436075-thumbnail-3x2-sow.jpg)
ಕಲಬುರಗಿ ವಿಮಾನ ನಿಲ್ದಾಣ ಅಭಿವೃದ್ಧಿಪಡಿಸಲು ಕೆಐಎಡಿಬಿ ಧಾರವಾಡ ಇವರು 567.10 ಎಕರೆ, ಕಲಬುರಗಿ ಸಹಾಯಕ ಆಯುಕ್ತರು 127.30 ಎಕರೆ ಹಾಗೂ ಕಲಬುರಗಿ ತಹಶೀಲ್ದಾರ್ರಿಂದ 48.23 ಎಕರೆ ಸೇರಿದಂತೆ ಒಟ್ಟಾರೆ 742.23 ಎಕರೆ ಪ್ರದೇಶವನ್ನು ಭೂ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಇತ್ತೀಚೆಗೆ ಬೆಂಗಳೂರಿನಲ್ಲಿ ರಾಜ್ಯ ಸರ್ಕಾರ ಮತ್ತು ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ನಡುವೆ ನಡೆದ ಪರಸ್ಪರ ಒಪ್ಪಂದದಂತೆ ವಿಮಾನ ನಿಲ್ದಾಣ ಪ್ರದೇಶದ ಭೌತಿಕ ಹಂಚಿಕೆ ಪ್ರಕ್ರಿಯೆ ನಡೆಯಿತು.
ವಿಮಾನ ನಿಲ್ದಾಣ ಪ್ರದೇಶದ ಭೌತಿಕ ಹಂಚಿಕೆ ಪ್ರಕ್ರಿಯೆ ಮುಗಿದ ಬಳಿಕ ಕಲಬುರಗಿ ವಿಮಾನ ನಿಲ್ದಾಣದ ನಿರ್ದೇಶಕ ಎಸ್.ಜ್ಞಾನೇಶ್ವರ ರಾವ್, ಕೂಡಲೇ ವಾಣಿಜ್ಯ ಹಾರಾಟ ಪ್ರಾರಂಭಕ್ಕೆ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದರು.