ಕಲಬುರಗಿ: ಮಧ್ಯ ರೈಲ್ವೆ ಸೊಲ್ಲಾಪುರ ವಿಭಾಗದ ಸಾವಳಗಿ ಮತ್ತು ಕಲಬುರಗಿ ನಡುವಿನ ರೈಲ್ವೆ ಕಾಮಗಾರಿ ಆರಂಭವಾಗಿದ್ದು, 20ಕ್ಕೂ ಅಧಿಕ ಪ್ಯಾಸೆಂಜರ್ ಹಾಗೂ ಹಲವು ಎಕ್ಸ್ಪ್ರೆಸ್ ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ಇಲ್ಲಿನ ರೈಲ್ವೆ ಇಲಾಖೆ ತಿಳಿಸಿದೆ.
ಕಲಬುರಗಿ-ಸಾವಳಗಿ ನಡುವೆ ಕಾಮಗಾರಿ ಆರಂಭ: ಕೆಲವು ರೈಲುಗಳ ಸಂಚಾರ ಸ್ಥಗಿತ - Traffic breakdown in Kalaburagi
ಸಾವಳಗಿ ಮತ್ತು ಕಲಬುರಗಿ ನಡುವಿನ ರೈಲ್ವೆ ಕಾಮಗಾರಿ ಆರಂಭವಾಗಿದ್ದರಿಂದ ಕೆಲವು ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಇನ್ನು ಕೆಲ ರೈಲುಗಳ ಮಾರ್ಗವನ್ನು ಬದಲಾಯಿಸಲಾಗಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ.
ಕೆಲವು ರೈಲುಗಳ ಸಂಚಾರ ಸ್ಥಗಿತ
ಡಬಲ್ ಲೈನ್ ಕಾಮಗಾರಿ ಕೈಗೆತ್ತಿಕೊಂಡ ಹಿನ್ನೆಲೆ ಸುಮಾರು 15 ದಿನಗಳ ಕಾಲ ಪ್ಯಾಸೆಂಜರ್ ಸೇರಿದಂತೆ ಎಕ್ಸ್ಪ್ರೆಸ್ ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿದೆ. ಕೆಲವು ಎಕ್ಸ್ಪ್ರೆಸ್ ರೈಲುಗಳ ಮಾರ್ಗವನ್ನು ಬದಲಾಯಿಸಲಾಗಿದೆ. ವಿಜಯಪುರ-ರಾಯಚೂರು ಪ್ಯಾಸೆಂಜರ್ ಸೇರಿದಂತೆ (ರೈಲ್ವೆ ನಂಬರ್ : 57129, 57131, 57659, 57133, 57130, 57134) ಹಲವು ರೈಲುಗಳ ಸಂಚಾರ ರದ್ದುಪಡಿಸಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.