ಕರ್ನಾಟಕ

karnataka

ETV Bharat / state

ಚಿಂಚೋಳಿ ಬಳಿ ಟೈರ್​ ಸ್ಫೋಟಗೊಂಡು ಕ್ರೂಷರ್ ಪಲ್ಟಿ: ಇಬ್ಬರು ಸಾವು, 10 ಮಂದಿಗೆ ಗಾಯ - ಟಯರ್​ ಸ್ಪೋಟಗೊಂಡು ಕ್ರೂಷರ್ ಪಲ್ಟಿ

ಟೈರ್​ ಸ್ಫೋಟಗೊಂಡು ಕ್ರೂಷರ್ ಪಲ್ಟಿಯಾದ ಪರಿಣಾಮ ಇಬ್ಬರು ಸಾವನ್ನಪ್ಪಿ ಹಲವರು ಗಾಯಗೊಂಡಿರುವ ಘಟನೆ ಚಿಂಚೋಳಿ ತಾಲೂಕು ಯಲಮಾಮಡಿ ಗ್ರಾಮದ ಬಳಿ ನಡೆದಿದೆ.

ಟಯರ್​ ಸ್ಪೋಟಗೊಂಡು ಕ್ರೂಷರ್ ಪಲ್ಟಿ
ಟಯರ್​ ಸ್ಫೋಟಗೊಂಡು ಕ್ರೂಷರ್ ಪಲ್ಟಿ

By

Published : Mar 3, 2020, 10:01 AM IST

ಕಲಬುರಗಿ:ಟೈರ್​ ಸ್ಫೋಟಗೊಂಡು ಕ್ರೂಷರ್ ಪಲ್ಟಿಯಾದ ಪರಿಣಾಮ ಇಬ್ಬರು ಸಾವನ್ನಪ್ಪಿ ಹಲವರು ಗಾಯಗೊಂಡಿರುವ ಘಟನೆ ಚಿಂಚೋಳಿ ತಾಲೂಕಿನ ಯಲಮಾಮಡಿ ಗ್ರಾಮದ ಬಳಿ ನಡೆದಿದೆ.

ಶಾಮರಾವ್ (65) ಹಾಗೂ ಮೋತಿಬಾಯಿ (55) ಮೃತರು ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಹತ್ತು ಜನರಿಗೆ ಗಾಯಗಳಾಗಿದ್ದು, ಇದರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನು ಬೀದರ್ ಹಾಗೂ ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಈ ಕುರಿತು ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details