ಕರ್ನಾಟಕ

karnataka

ETV Bharat / state

ಕಲಬುರಗಿಯಲ್ಲಿ ಬಂದೂಕಿನ ಸದ್ದು; ಮತ್ತೆ ಕೊಲೆ-ಸುಲಿಗೆಗಿಳಿದ ಪುಡಿ ರೌಡಿಗಳು - kalburgi police

ಎದೆಗೆ ಗುಂಡು ತಾಕಿ ತೀವ್ರ ರಕ್ತಸ್ರಾವದಿಂದ ನೆಲಕ್ಕುರುಳಿದ ರಂಕಾ ಅವರನ್ನು ಆಸ್ಪತ್ರೆಗೆ ದಾಖಲಿಸಿತ್ತಾದರೂ ಬದುಕುಳಿಯಲಿಲ್ಲ. ಹಣಕಾಸಿ‌ನ ವ್ಯವಹಾರಕ್ಕೆ ಸಂಬಂಧಿಸಿದಂತೆ ಸುನೀಲ್​ ರಂಕಾ ಕೊಲೆಯಾಗಿರಬಹುದು ಎನ್ನಲಾಗ್ತಿದೆ. ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಎನ್. ಸತೀಶ್ ಕುಮಾರ ಸೇರಿ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Tiles merchant shot dead in Kalburgi by unknown man
ಕಲಬುರಗಿಯಲ್ಲಿ ಸದ್ದು ಮಾಡುತ್ತಿವೆ ಬಂದೂಕುಗಳು: ಮತ್ತೆ ಕೊಲೆ-ಸುಲಿಗೆಗಿಳಿದ ಪುಡಿ ರೌಡಿಗಳು

By

Published : Aug 29, 2020, 3:54 PM IST

ಕಲಬುರಗಿ:ನಗರದಲ್ಲೀಗ ಪುಡಿ ರೌಡಿಗಳ ಅಟ್ಟಹಾಸ ಮುಂದುವರಿದಿದೆ. ಇತ್ತೀಚಿಗಷ್ಟೆ ಇಲ್ಲಿನ ಗಾರ್ಡನ್​ ಬಳಿ ಯುವಕನೊಬ್ಬನನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದರು. ಈ ಘಟನೆ ಇನ್ನೂ ಹಸಿಯಾಗಿರುವಾಗಲೇ ಇನ್ನೊಂದು ಕೊಲೆ ನಡೆದಿದ್ದು, ಜನರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.

ಕಳೆದ ರಾತ್ರಿ ಗೋದುತಾಯಿ ನಗರದಲ್ಲಿ ಮನೆಯ ಮುಂದೆಯೇ ರಾಜಸ್ಥಾನ ಮೂಲಕ ಟೈಲ್ಸ್ ಉದ್ಯಮಿ ಸುನೀಲ್ ರಂಕಾ ಎಂಬುವರನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಜೇವರ್ಗಿ ಕ್ರಾಸ್ ಬಳಿಯ ಟೈಲ್ಸ್ ಸೆಂಟರ್ ಬಂದ್ ಮಾಡಿ ಮನೆಗೆ ಬರುತ್ತಿದ್ದ ಸುನೀಲ್ ರಂಕಾ ಹಿಂದೆ ಬೈಕ್ ಮೇಲೆ ಬಂದ ಇಬ್ಬರು ಮುಸುಕುದಾರಿಗಳು ರಂಕಾ ಬಳಿ ಜಗಳಕ್ಕೆ ಇಳಿದು, ಗುಂಡುಹಾರಿಸಿ ಪರಾರಿಯಾಗಿದ್ದಾರೆ.

ನಗರದಲ್ಲಿ ನಡೆದ ಕೊಲೆಯ ಬಗ್ಗೆ ಡಿಸಿಪಿ ಕಿಶೋರ್ ಬಾಬು ಪ್ರತಿಕ್ರಿಯೆ

ಎದೆಗೆ ಗುಂಡು ತಾಕಿ ತೀವ್ರ ರಕ್ತಸ್ರಾವದಿಂದ ನೆಲಕ್ಕುರುಳಿದ ರಂಕಾ ಅವರನ್ನು ಆಸ್ಪತ್ರೆಗೆ ದಾಖಲಿಸಿತ್ತಾದರೂ ಬದುಕುಳಿಯಲಿಲ್ಲ. ಸುನೀಲ್ ರಂಕಾ ಕೊಲೆ ಹಣಕಾಸಿ‌ನ ವ್ಯವಹಾರಕ್ಕೆ ಸಂಬಂಧಿಸಿರಬಹುದು ಎನ್ನಲಾಗ್ತಿದೆ. ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಎನ್. ಸತೀಶ್ ಕುಮಾರ ಸೇರಿ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಒಂದಿಷ್ಟು ದಿನ ಪುಂಡಾಟ ಬದಿಗಿಟ್ಟು ಸೈಲೆಂಟ್ ಆಗಿದ್ದ ಪುಡಿರೌಡಿಗಳು ಮತ್ತೀಗ ಕೊಲೆ, ಸುಲಿಗೆಗೆ ಇಳಿದಿರುವುದು ಜನರ ನಿದ್ದೆಗೆಡಿಸಿದೆ. ಹಗಲು-ರಾತ್ರಿ ಎನ್ನದೆ ಯಾರ ಭಯವೂ ಇಲ್ಲದೆ ಕೊಲೆ ಸುಲಿಗೆ ಮಾಡುತ್ತಿದ್ದಾರೆ. ನಗರದ ಐವಾನ್​ ಶಾಹಿ ಪ್ರದೇಶದಲ್ಲಿ ಯುವಕನ ಕೊಲೆ ಯತ್ನ, ಜೇವರ್ಗಿ ರಸ್ತೆ ಅಂಡರ್ ಬ್ರಿಡ್ಜ್ ಬಳಿಯ ಕೊಲೆ, ತೀರಾ ಇತ್ತೀಚಿಗೆ ಸಾರ್ವಜನಿಕ ಉದ್ಯಾನವನದ ಮುಂದೆ ನಡೆದ ಯುವಕನ ಬರ್ಬರ ಕೊಲೆಯ ಘಟನೆಗಳು ಮಾಸುವ ಮುನ್ನವೇ ಇದೀಗ ಮತ್ತೊಂದು ಕೊಲೆ ನಡೆದುಹೋಗಿದೆ.

ABOUT THE AUTHOR

...view details