ಕರ್ನಾಟಕ

karnataka

ETV Bharat / state

ಕಲಬುರಗಿಯಲ್ಲಿ ಹುಡುಗಿ ವಿಷಯಕ್ಕೆ ಜಗಳ, ಯುವಕನ ಕೊಲೆಯಲ್ಲಿ ಅಂತ್ಯ - ಕಲಬುರಗಿ ಯುವಕನ ಕೊಲೆ

ಕಲಬುರಗಿಯಲ್ಲಿ ಹುಡುಗಿ ವಿಚಾರವಾಗಿ ಆರಂಭವಾದ ಜಗಳ ಯುವಕನ ಕೊಲೆಯಲ್ಲಿ ಅಂತ್ಯವಾಗಿದೆ.

Three persons murdered a youth at Kalburgi
ಯುವಕನ ಕೊಲೆಯಲ್ಲಿ ಅಂತ್ಯ

By

Published : Apr 25, 2020, 1:22 PM IST

ಕಲಬುರಗಿ:ಹುಡುಗಿ ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರ ಮಧ್ಯೆ ಆರಂಭವಾಗಿದ್ದ ಜಗಳ ಯುವಕನೊಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಗರದ ಮಾಂಗರವಾಡಿ ಎಸ್‌ಟಿಬಿಟಿ ಬಳಿ ನಡೆದಿದೆ.

ಚಿರಂಜೀವಿ(22) ಕೊಲೆಗೀಡಾಗಿರುವ ಯುವಕ. ಹುಡುಗಿಯೊಬ್ಬಳ ವಿಚಾರವಾಗಿ ಚಿರಂಜೀವಿ ಮತ್ತು ಕಾಶಿನಾಥ್​ ಎಂಬುವನ ನಡುವೆ ಜಗಳ ನಡೆದಿತ್ತಂತೆ. ಈ ಜಗಳ ವಿಕೋಪಕ್ಕೆ ತಿರುಗಿ ಕಾಶಿನಾಥ್​​ ತನ್ನ ಸಹಚರರೊಂದಿಗೆ ಸೇರಿಕೊಂಡು ಚಿರಂಜೀವಿಯನ್ನು ಹತ್ಯೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ತೀವ್ರ ರಕ್ತಸಾವ್ರದಿಂದ ಬಳಲುತ್ತಿದ್ದ ಗಾಯಾಳು ಚಿರಂಜೀಯನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಚಿರಂಜೀವಿ ಕೊನೆಯುಸಿರೆಳೆದಿದ್ದಾನೆ.

ಪ್ರಕರಣ ಸಂಬಂಧ ಬ್ರಹ್ಮಪುರ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ತನಿಖೆ ಆರಂಭಿಸಿದ್ದಾರೆ.

ABOUT THE AUTHOR

...view details