ಕರ್ನಾಟಕ

karnataka

ETV Bharat / state

ಕಲಬುರಗಿ: ಕೊರೊನಾಗೆ ಮೂವರು ಬಲಿ - ಕಲಬುರಗಿ‌ ಕೊರೊನಾ ಸುದ್ದಿ

ಕಲಬುರಗಿ ಜಿಲ್ಲೆಯಲ್ಲಿ ಇಂದು ಕೊರೊನಾದಿಂದಾಗಿ‌ ಮೂವರು ಸಾವನ್ನಪ್ಪಿದ್ದಾರೆ.

Kalaburagi
Kalaburagi

By

Published : Aug 19, 2020, 11:27 PM IST

ಕಲಬುರಗಿ:ಕೊರೊನಾ ಸೋಂಕಿನಿಂದ ಜಿಲ್ಲೆಯಲ್ಲಿ ಮತ್ತೆ ಮೂವರು ನಿಧನರಾಗಿದ್ದಾರೆ. ಇದರಿಂದ ಕೊರೊನಾ ಸೋಂಕಿಗೆ ಜಿಲ್ಲೆಯಲ್ಲಿ ಮೃತರಾದವರ ಸಂಖ್ಯೆ175ಕ್ಕೆ ಏರಿಕೆಯಾಗಿದೆ.

ತೀವ್ರ ಉಸಿರಾಟ ತೊಂದರೆ, ಅಧಿಕ ರಕ್ತದೊತ್ತಡ ಹಾಗೂ ನ್ಯುಮೋನಿಯಾ ಸಮಸ್ಯೆಯಿಂದ ಬಳಲುತ್ತಿದ್ದ ಕಲಬುರಗಿಯ ರಾಮನಗರ ನಿವಾಸಿ 73 ವರ್ಷದ ವೃದ್ಧ (P-2130590) ಹಾಗೂ ಕಲಬುರಗಿ ತಾಲೂಕಿನ ಶರಣಸಿರಸಗಿಯ 65 ವರ್ಷದ ವೃದ್ಧ (P-223866) ಮತ್ತು ಕಲಬುರಗಿ ನಗರದ ಆಳಂದ‌ ಚೆಕ್ ಪೋಸ್ಟ್ ಹತ್ತಿರದ 55 ವರ್ಷದ ವ್ಯಕ್ತಿ (P-230000) ನಿಧನರಾಗಿದ್ದಾರೆ.

ಇಂದು ಮತ್ತೆ 154 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 9,419ಕ್ಕೆ ಏರಿಕೆಯಾಗಿದೆ. 247 ಜನ ಇಂದು ಸೋಂಕಿನಿಂದ ಗುಣಮುಖರಾಗಿದ್ದು, ಒಟ್ಟು ಗುಣಮುಖ ಆದವರ ಸಂಖ್ಯೆ 7378ಕ್ಕೆ ಏರಿಕೆಯಾಗಿದೆ. 1866 ಸಕ್ರಿಯ ಪ್ರಕರಣಗಳಿವೆ.

ABOUT THE AUTHOR

...view details