ಕಲಬುರಗಿ: ಜಿಲ್ಲೆಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಸಂಪೂರ್ಣ ಲಾಕ್‌ಡೌನ್ ಜಾರಿಯಾಗಿದ್ದು, ನಗರ ಸಂಪೂರ್ಣ ಸ್ತಬ್ಧವಾಗಿದೆ.
ಕಲಬುರಗಿಯಲ್ಲಿ 3 ದಿನದ ಲಾಕ್‌ಡೌನ್: ಮೊದಲ ದಿನ ಉತ್ತಮ ಸ್ಪಂದನೆ - Kalburgi News 2021
ಕಲಬುರಗಿಯಲ್ಲಿ ಇಂದಿನಿಂದ ಮೂರು ದಿನ ಅಂದರೆ ಗುರುವಾರದಿಂದ ಶನಿವಾರದವರೆಗೆ ಸಂಪೂರ್ಣ ಲಾಕ್‌ಡೌನ್ ಜಾರಿಗೆ ತರಲಾಗಿದ್ದು, ತರಕಾರಿ, ಹಣ್ಣು, ದಿನಸಿ ಅಂಗಡಿಗಳಿಗೂ ಸಹ ಅನುಮತಿ ನೀಡಿಲ್ಲ.
ವಾರದ ಮೂರುದಿನ (ಗುರುವಾರದಿಂದ ಶನಿವಾರದವರೆಗೆ) ಸಂಪೂರ್ಣ ಲಾಕ್‌ಡೌನ್ ಇರಲಿದ್ದು, ತರಕಾರಿ, ಹಣ್ಣು, ದಿನಸಿ ಅಂಗಡಿಗಳಿಗೂ ಅನುಮತಿ ನೀಡಿಲ್ಲ. ಪ್ರತಿನಿತ್ಯ ಬೆಳಗಾದರೆ ಜನಜಾತ್ರೆಯಂತೆ ಇರುತ್ತಿದ್ದ ಸೂಪರ್ ಮಾರ್ಕೆಟ್, ಕಿರಾಣಿ ಬಜಾರ್ ಕೂಡ ಇಂದು ಬಿಕೋ ಎನ್ನುತ್ತಿದೆ. ನಗರದ ಪ್ರಮುಖ ವೃತ್ತ, ರಸ್ತೆಗಳಲ್ಲಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಬ್ಯಾರಿಕೇಡ್ಗಳನ್ನು ಅಳವಡಿಸಿ ವಾಹನಗಳ ತಪಾಸಣೆ ನಡೆಯುತ್ತಿದೆ.
ಮೆಡಿಕಲ್, ಆಸ್ಪತ್ರೆ, ಹಾಲು ಸೇರಿದಂತೆ ತುರ್ತು ಮತ್ತು ಅಗತ್ಯ ಸೇವೆಗಳ ಅಂಗಡಿಗಳು ಮಾತ್ರ ತೆರೆದಿವೆ. ಅಫಜಲಪುರ ಪಟ್ಟಣದಲ್ಲಿ ಪೊಲೀಸರು ಕಣ್ಗಾವಲು ಹಾಕಿದ್ದು ಪಟ್ಟಣಗಳು ಮೌನವಾಗಿವೆ.